ಪಾವಗಡ: ತಾಲ್ಲೂಕಿನ ಕೊಡಿಗೆಹಳ್ಳಿ ಗ್ರಾಮದ ಶ್ರೀನಿವಾಸ್ (45) ಸಿಡಿಲು ಬಡಿದು ಭಾನುವಾರ ಮೃತಪಟ್ಟಿದ್ದಾರೆ.
ಗ್ರಾಮದಲ್ಲಿ ಚಿಲ್ಲರೆ ಅಂಗಡಿ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದರು. ಭಾನುವಾರ ಗುಡುಗು ಸಹಿತ ಮಳೆ ಬಿದ್ದಾಗ ಮರದ ಪಕ್ಕವಿದ್ದ ಪೆಟ್ಟಿಗೆ ಅಂಗಡಿಗೆ ಸಿಡಿಲು ಬಡಿದಿದೆ. ಅಂಗಡಿ ಬಳಿಯ ಚಪ್ಪರದಡಿ ಇದ್ದ ಶ್ರೀನಿವಾಸ್ ಮೃತಪಟ್ಟಿದ್ದಾರೆ.
ಶ್ರೀನಿವಾಸ್ ಪತ್ರಿಕಾ ವಿತರಕರಾಗಿಯೂ ಕಾರ್ಯನಿರ್ವಹಿಸಿದ್ದರು.