ತುಮಕೂರು: ಎಂಬತ್ತು-ತೊಂಬತ್ತರ ದಶಕದ ಹಾಡುಗಳ ಗುನುಗು, ಘಮ-ಘಮಿಸಿದ ಅಡುಗೆ, ಒಗಟು ಬಿಡಿಸುವ ಸ್ಪರ್ಧೆಯ ರೋಚಕತೆ, ಬದುಕಿನ ಒತ್ತಡ ಮರೆತು ನಗೆ ಬೀರಿದ ಮಹಿಳೆಯರು... ಈ ಎಲ್ಲ ಅಪರೂಪದ ಕ್ಷಣಗಳಿಗೆ ಸಾಕ್ಷಿಯಾಗಿದ್ದು ‘ಭೂಮಿಕಾ ಕ್ಲಬ್’.

ನಗರದ ಮುರುಘಾ ರಾಜೇಂದ್ರ ಸಭಾಂಗಣದಲ್ಲಿ ಭಾನುವಾರ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಬಳಗದ ‘ಭೂಮಿಕಾ ಕ್ಲಬ್’ ವೇದಿಕೆಯು ‘ಫ್ರೀಡಂ ಹೆಲ್ತ್ ಆಯಿಲ್', ತುಮಕೂರಿನ ‘ಜನನಿ ಫರ್ಟಿಲಿಟಿ ಮತ್ತು ಐವಿಎಫ್’ ಸೆಂಟರ್ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಮಹಿಳೆಯರ ಮುಖದಲ್ಲಿ ನಗು ಅರಳಿಸಿತು. ನಾರಿಯರು ನಕ್ಕು-ನಲಿದರು. ಎಲ್ಲ ಒತ್ತಡ ಮರೆತು ನಿರಾಳವಾಗಿ ಮನೆ ಕಡೆಗೆ ಹೆಜ್ಜೆ ಹಾಕಿದರು.

ಹಾಡು, ಒಗಟು, ನೃತ್ಯ ಹೀಗೆ ಹಲವು ಬಗೆಯ ಮನರಂಜನಾ ಕಾರ್ಯಕ್ರಮಗಳ ಜತೆಗೆ ಆರೋಗ್ಯ ಕುರಿತು ಮಹಿಳೆಯರಲ್ಲಿ ಜಾಗೃತಿ ಮೂಡಿಸಲಾಯಿತು. ಬಾಯಿ ಆರೋಗ್ಯವಾಗಿ ಇಟ್ಟುಕೊಳ್ಳುವ ಕುರಿತು ಮಾಹಿತಿ ಹಂಚಿಕೊಳ್ಳಲಾಯಿತು. ಸ್ಥಳದಲ್ಲಿಯೇ ಅಡುಗೆ ತಯಾರಿ ಸ್ಪರ್ಧೆಯ ಬಗ್ಗೆ ತಿಳಿಯದ ಮಹಿಳೆಯರು ತಾವೇ ಮನೆಯಲ್ಲಿ ವಿವಿಧ ಬಗೆಯ ಅಡುಗೆ ತಯಾರಿಸಿ ತಂದಿದ್ದರು.

ಭಾಗ್ಯಶ್ರೀಗೌಡ ಅವರ ಸುಮಧುರ ಧ್ವನಿಯಲ್ಲಿ ಮೂಡಿ ಬಂದ ‘ನಮ್ಮಮ್ಮ ಶಾರದೆ, ಉಮಾಮಹೇಶ್ವರಿ’ ಪ್ರಾರ್ಥನೆ ಗೀತೆಯು ಕಾರ್ಯಕ್ರಮದ ಮೆರುಗು ಹೆಚ್ಚಿಸಿತು. ‘ಜನನಿ ಫರ್ಟಿಲಿಟಿ ಮತ್ತು ಐವಿಎಫ್’ ಸೆಂಟರ್ ಸಂಸ್ಥಾಪಕ ಡಾ.ನಾಗೇಶ್, ರೋಟರಿ ತುಮಕೂರು ಅಧ್ಯಕ್ಷೆ ರಾಜೇಶ್ವರಿ ರುದ್ರಪ್ಪ, ‘ಪ್ರಜಾವಾಣಿ’ ಸಾಧಕಿ ಪ್ರಶಸ್ತಿಗೆ ಭಾಜನರಾಗಿರುವ ಬಡಗಿ ಕೆಲಸದಿಂದ ಗಮನ ಸೆಳೆದಿರುವ ಲಲಿತಾ ರಘುನಾಥ್ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ವ್ಯಾಯಾಮ ಅಗತ್ಯ: ಕಾರ್ಯಕ್ರಮ ಉದ್ಘಾಟಿಸಿದ ಡಾ.ನಾಗೇಶ್ ಮಾತನಾಡಿ, ‘ಒತ್ತಡದಿಂದ ಹೊರ ಬರಲು ಇಂತಹ ಕಾರ್ಯಕ್ರಮ ಸಹಕಾರಿಯಾಗುತ್ತದೆ. ಜನರ ಜತೆ ಬೆರೆತು ಕ್ರಿಯಾಶೀಲತೆ ತೋರಿಸಲು ಉತ್ತಮ ವೇದಿಕೆಯಾಗಿದೆ. ಮಹಿಳೆಯರು ದೈನಂದಿನ ಕೆಲಸದಲ್ಲಿ ನಿರತರಾಗಿ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಪ್ರತಿ ದಿನ ಒಂದು ಗಂಟೆಯಾದರೂ ದೈಹಿಕ ಕಸರತ್ತು ನಡೆಸಬೇಕು. ಯೋಗ, ಧ್ಯಾನ, ವಾಯು ವಿಹಾರ, ಪ್ರಾಣಾಯಾಮ ಮಾಡಿದರೆ ಆರೋಗ್ಯ ಕಾಪಾಡಿಕೊಳ್ಳಬಹುದು’ ಎಂದು ಸಲಹೆ ಮಾಡಿದರು.

ಕುಟುಂಬದ ಸದಸ್ಯರ ಜತೆ ಸಮಯ ಕಳೆದರೆ ಒತ್ತಡ ಕಡಿಮೆಯಾಗಲಿದೆ. ತರಕಾರಿ, ನೀರು ಪೌಷ್ಟಿಕಾಂಶಯುಕ್ತ ಆಹಾರ ಸೇವಿಸಬೇಕು. ಮಹಿಳೆ ಆರೋಗ್ಯವಾಗಿದ್ದರೆ ಇಡೀ ಮನೆ ಆರೋಗ್ಯವಾಗಿ ಇದ್ದಂತೆ. ಮದುವೆಯಾದ ಎರಡು ವರ್ಷಗಳ ನಂತರ ಮಕ್ಕಳು ಆಗದಿದ್ದರೆ ವೈದ್ಯರ ಬಳಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಸೂಕ್ತ ಪರಿಹಾರ ಕಂಡುಕೊಳ್ಳಬೇಕು ಎಂದು ಮಾರ್ಗದರ್ಶನ ನೀಡಿದರು.

ರೋಟರಿ ಅಧ್ಯಕ್ಷೆ ರಾಜೇಶ್ವರಿ ರುದ್ರಪ್ಪ, ‘ಮಹಿಳೆಯರು ಇದ್ದರೆ ಮಾತ್ರ ಪ್ರಪಂಚ ನಡೆಯುತ್ತದೆ. ಇಲ್ಲದಿದ್ದರೆ ಕತ್ತಲು ಆವರಿಸುತ್ತದೆ. ಮಹಿಳೆಯರು ಮನಸ್ಸು ಮಾಡಿದರೆ ಯಾವುದೂ ಕಷ್ಟವಲ್ಲ. ಒಳ್ಳೆಯ ಮನಸ್ಸು, ಗುರಿ, ಗುರು ಇದ್ದರೆ ಏನಾದರೂ ಸಾಧಿಸಬಹುದು. ಅನೇಕ ಸಾಧಕಿಯರು ನಮ್ಮ ಮುಂದಿದ್ದಾರೆ. ಅವರೇ ನಮಗೆ ಪ್ರೇರಣೆ’ ಎಂದರು.

ಅಕ್ಷಯ್, ಸ್ನೇಹಾ ನೀಲಪ್ಪಗೌಡ ಕಾರ್ಯಕ್ರಮ ನಿರೂಪಿಸಿದರು.

ವೇದಿಕೆ ಕಲ್ಪಿಸಿದ ‘ಪ್ರಜಾವಾಣಿ’

‘ಕಾರ್ಪೆಂಟರ್ ಕೆಲಸ ಶುರು ಮಾಡುವುದಕ್ಕೂ ಮುನ್ನ ಊಟ ಮಾಡಲು ಕಷ್ಟವಾಗುತ್ತಿತ್ತು. ಈಗ 10 ಜನರಿಗೆ ಊಟ ಹಾಕುವ ಸಾಮರ್ಥ್ಯ ಇದೆ. ಹಳ್ಳಿಯಲ್ಲಿದ್ದ ನನ್ನನ್ನು ಗುರುತಿಸಿ ಈ ವೇದಿಕೆ ಕಲ್ಪಿಸಿದ್ದು ‘ಪ್ರಜಾವಾಣಿ’ ಬಳಗ’ ಎಂದು ತೋವಿನಕೆರೆಯ ಲಲಿತಾ ರಘುನಾಥ್ ಹೇಳಿದರು. 2025-ರ ಪ್ರಜಾವಾಣಿ ಸಾಧಕಿ ಪ್ರಶಸ್ತಿ ಸ್ವೀಕರಿಸಿದ ನಂತರ ಎಲ್ಲ ಕಡೆಯಿಂದ ಕರೆಗಳು ಬರುತ್ತಿವೆ. ಜಿಲ್ಲೆಯ ವಿವಿಧೆಡೆ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿದೆ. ಇದೆಲ್ಲ ‘ಪ್ರಜಾವಾಣಿ’ಯಿಂದ ಸಾಧ್ಯವಾಗಿದೆ ಎಂದು ಸಂತಸ ಹಂಚಿಕೊಂಡರು.

ಉಪ್ಪಿಟ್ಟು ಘಮ

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರ ಹೆಸರು ಚೀಟಿಯಲ್ಲಿ ಬರೆದು ಅತಿಥಿಗಳಿಂದ ಚೀಟಿ ಎತ್ತಿಸಲಾಯಿತು. ಚೀಟಿಯಲ್ಲಿ ಹೆಸರಿದ್ದ ನಗರದ ಶಿಲ್ಪಶ್ರೀ ತೋವಿನಕೆರೆಯ ಲಲಿತಾ ರಘುನಾಥ್ ಅಡುಗೆ ಸ್ಪರ್ಧೆಯಲ್ಲಿ ಮುಖಾಮುಖಿಯಾದರು. ಇಬ್ಬರು ತಯಾರಿಸಿದ ಉಪ್ಪಿಟ್ಟಿನ ಘಮ ಸಭಾಂಗಣದ ತುಂಬೆಲ್ಲ ಹರಡಿತ್ತು. ಶೃತಿ ರಾಜೇಶ್ವರಿ ರುದ್ರಪ್ಪ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ಶಿಲ್ಪಶ್ರೀ ಮೊದಲ ಬಹುಮಾನ ಪಡೆದರು. ‘ಇದೇ ಮೊದಲ ಬಾರಿಗೆ ಇಂತಹ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದೇನೆ. ತುಂಬಾ ಒತ್ತಡ ಅನ್ನಿಸಿತು’ ಎಂದರು ಲಲಿತಾ ರಘುನಾಥ್. ‘ಮನೆಗೆ ಸೀಮಿತವಾಗಿದ್ದ ನಮಗೆ ‘ಪ್ರಜಾವಾಣಿ’ ಒಂದು ವೇದಿಕೆ ಕಲ್ಪಿಸಿದೆ. ಸ್ಪರ್ಧೆಯಲ್ಲಿ ಭಾಗವಹಿಸಿದ್ದಕ್ಕೆ ಖುಷಿಯಾಗಿದೆ’ ಎಂದು ಶಿಲ್ಪಶ್ರೀ ಪ್ರತಿಕ್ರಿಯಿಸಿದರು. ‘ಫ್ರೀಡಂ ಹೆಲ್ತ್ ಆಯಿಲ್’ನ ಮೋಹನ್ಕುಮಾರ್ ಅಶೋಕ್ ವಿಜೇತರಿಗೆ ಬಹುಮಾನ ವಿತರಿಸಿದರು.

‘ಬಾಯಿ ಸ್ವಚ್ಛವಾಗಿಟ್ಟುಕೊಳ್ಳಿ’

‘ಹಲ್ಲುಗಳಿಗೆ ಚಿನ್ನಕ್ಕಿಂತ ಜಾಸ್ತಿ ಬೆಲೆ ಇದೆ. ಬಾಯಿ ಕೆಡದಂತೆ ನೋಡಿಕೊಳ್ಳಬೇಕು. ಸದಾ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು’ ಎಂದು ಡಾ.ಚಂದ್ರಕಲಾ ಮಹಿಳೆಯರಿಗೆ ‘ಬಾಯಿ ಆರೋಗ್ಯ’ ಕುರಿತು ಮನವರಿಕೆ ಮಾಡಿಕೊಟ್ಟರು. ಆಹಾರ ಸೇವಿಸಿದ ನಾಲ್ಕು ಗಂಟೆಗಳ ನಂತರ ಬಾಯಿ ವಾಸನೆ ಬರುತ್ತದೆ. ಬಳಿಕ ಬ್ಯಾಕ್ಟೀರಿಯಾ ಉತ್ಪತ್ತಿಯಾಗುತ್ತದೆ. ಆಗಾಗ ಬಾಯಿ ತೊಳೆಯುತ್ತಿರಬೇಕು. ಇಲ್ಲದಿದ್ದರೆ ವಾಸನೆ ಹೆಚ್ಚಾಗಿ ಆರೋಗ್ಯ ಹಾಳಾಗುತ್ತದೆ. ಬಾಯಿಯಲ್ಲಿ ಹೆಚ್ಚಿನ ಸಮಸ್ಯೆ ಕಾಣಿಸಿಕೊಂಡ ಕೂಡಲೇ ದಂತ ವೈದ್ಯರ ಬಳಿ ಪರೀಕ್ಷಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು. ಬಾಯಿ ಕ್ಯಾನ್ಸರ್ ಹರಡದಂತೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು. ಬಾಯಿ ಸ್ವಚ್ಛವಾಗಿ ಇಟ್ಟುಕೊಳ್ಳದಿದ್ದರೆ ಮೆದುಳು ಸೇರಿದಂತೆ ಇಡೀ ದೇಹಕ್ಕೆ ತೊಂದರೆಯಾಗುತ್ತದೆ. ಸದಾ ಎಚ್ಚರಿಕೆಯಿಂದ ಇರಬೇಕು ಎಂದು ಜಾಗೃತಿ ಮೂಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.