ತುರುವೇಕೆರೆ: ತ್ರಿವಿಧ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿ ಅವರ 116ನೇ ಜನ್ಮ ದಿನೋತ್ಸವನ್ನು ತಾಲ್ಲೂಕಿನ ಹಲವೆಡೆ ವಿಶೇಷ ಕಾರ್ಯಕ್ರಮಗಳೊಂದಿಗೆ ಭಕ್ತರು ಶನಿವಾರ ಆಚರಿಸಿದರು.
ಮಾದಪಟ್ಟಣ ಗೇಟ್ ಸಮೀಪ ಗ್ರಾಮಸ್ಥರು, ಯುವಕರು ಹಾಗೂ ಭಕ್ತ ಮಂಡಳಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸ್ವಾಮೀಜಿಯ ಬೃಹತ್ ಭಾವಚಿತ್ರವಿಟ್ಟು ವಿಶೇಷ ಪುಷ್ಪಾಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು.
ಮಹಿಳೆಯರು ಸೇರಿದಂತೆ ನೆರೆದಿದ್ದ ಭಕ್ತರು ಭಾವಚಿತ್ರಕ್ಕೆ ಫಲಪುಷ್ಪ ಇಟ್ಟು ಪೂಜೆ ಸಲ್ಲಿಸಿದರು. ಭಜನಾ ಮಂಡಳಿ ಸದಸ್ಯರು ಭಜನಾ ಕಾರ್ಯಕ್ರಮ ನಡೆಸಿ ಕೊಟ್ಟರು. ಪಾನಕ, ಮಜ್ಜಿಗೆ, ಮೊಸರನ್ನ, ಜಿಲೇಬಿ, ಪಲಾವು, ಪಾಯಸ ವಿತರಿಸ ಲಾಯಿತು.
ನಿವೃತ್ತ ಶಿಕ್ಷಕ ನಿಜಗುಣಯ್ಯ ಮಾತನಾಡಿ, ಸಿದ್ಧಗಂಗಾ ಶ್ರೀ ಸಾವಿರಾರು ಮಕ್ಕಳಿಗೆ ಅನ್ನ, ಅಕ್ಷರ, ಜ್ಞಾನ ನೀಡುವ ಮೂಲಕ ತ್ರಿವಿಧ ದಾಸೋಹಿಯಾಗಿದ್ದರು ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.