ಬೈರೇನಹಳ್ಳಿ- ಅಕ್ಕಾಜಿಹಳ್ಳಿ ಸಂಪರ್ಕ ರಸ್ತೆಯ ಕರಿಚಿಕ್ಕನಹಳ್ಳಿ ಬಳಿ ರಸ್ತೆ
ಪಟ್ಟಣದ ಹೊರವಲಯದ ಹುಲಿಕುಂಟೆ ಬೈಪಾಸ್ ಬಳಿ ರಸ್ತೆ ಸ್ಥಿತಿ
ರಸ್ತೆಗಳು ಸಂಪೂರ್ಣ ಹಾಳಾಗಿವೆ. ಮಳೆ ಬಂದರೆ ನೀರು ನಿಲ್ಲುವುದರಿಂದ ರಸ್ತೆ ಕಾಣುವುದೇ ಕಷ್ಟ. ದ್ವಿಚಕ್ರ ವಾಹನಗಳಲ್ಲಿ ಪ್ರಯಾಣಿಸುವುದು ಅಪಾಯಕಾರಿ.
– ಗೌ.ರಾ.ರಾಮಮೂರ್ತಿ, ಗೌರಗೊಂಡನಹಳ್ಳಿ
ಭಾರಿ ಲಾರಿಗಳು ನಮ್ಮ ರಸ್ತೆಗಳನ್ನು ಹಾಳುಮಾಡಿವೆ. ರಸ್ತೆ ನಿರ್ಮಾಣವಾದ ಕೆಲವು ವರ್ಷಗಳಲ್ಲೇ ಹೀಗಾಗಿದೆ. ಇದರಿಂದ ನಮ್ಮ ಗ್ರಾಮಗಳು ಸಂಪರ್ಕ ಕಳೆದುಕೊಳ್ಳುವಂತಾಗಿದೆ. ಅಧಿಕಾರಿಗಳು ಕ್ರಮ ಕೈಗೊಳ್ಳಲಾಗಿದೆ.
– ಬಿ.ಕೆ.ರಮೇಶ್, ಬೊಮ್ಮಲದೇವಿಪುರ
ಕೊರಟಗೆರೆ ಮುಖ್ಯರಸ್ತೆಯ ತಾಲ್ಲೂಕು ಕಚೇರಿ ಮುಂಭಾಗ ಹುಲಿಕುಂಟೆ ಬೈಪಾಸ್ ರಸ್ತೆ ತೀವ್ರ ಸ್ವರೂಪದಲ್ಲಿ ಹಾಳಾಗಿದೆ. ಈ ಜಾಗದಲ್ಲಿ ಅನೇಕ ಅಪಘಾತಗಳಾದರೂ ದುರಸ್ತಿ ಕೈಗೊಳ್ಳುತ್ತಿಲ್ಲ.
– ದರ್ಶನ್, ಪದವಿ ವಿದ್ಯಾರ್ಥಿ
ಕೊರಟಗೆರೆ ತಾಲ್ಲೂಕಿನ ಗ್ರಾಮೀಣ ರಸ್ತೆಗಳು ಕ್ರಷರ್ ಲಾರಿಗಳ ಹಾವಳಿಯಿಂದ ಹಾಳಾಗುತ್ತಿವೆ. ನಿಯಮ ಮೀರಿ ಭಾರಿ ಲಾರಿಗಳು ಓಡಾಡುವ ಕಾರಣ ಸಮಸ್ಯೆ ಗಂಭೀರ ಸ್ವರೂಪ ಪಡೆದಿದೆ. ಸರ್ಕಾರ ಕ್ರಮಕೈಗೊಳ್ಳಬೇಕು.