ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ತರಬೇನಹಳ್ಳಿ ತೋಟಗಳಲ್ಲಿ ಒಂದು ವಾರದಿಂದ ಚಿರತೆ ಕಾಣಿಸಿಕೊಂಡಿದೆ.
ಗ್ರಾಮದ ಷಡಕ್ಷರಿ ಮತ್ತಿತರರ ತೋಟಗಳಲ್ಲಿ ಓಡಾಡಿದೆ. ತೋಟದ ಮನೆಯಲ್ಲಿ ಅಳವಡಿಸಿರುವ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಚಿರತೆ ಚಲನವಲನದ ದೃಶ್ಯ ಸೆರೆಯಾಗಿದೆ. ತೋಟದ ಕೆಲಸಗಾರರು ಸಹ ಚಿರತೆ ಓಡಾಟ ವೀಕ್ಷಿಸಿದ್ದಾರೆ ಎಂದು ಷಡಕ್ಷರಿ ತಿಳಿಸಿದ್ದಾರೆ.
ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಈಗಾಗಲೇ ಎರಡು ಬಾರಿ ತೋಟಕ್ಕೆ ಬಂದು ಪರಿಶೀಲಿಸಿದ್ದಾರೆ. ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಚಿರತೆ ದೃಶ್ಯ ಗೋಚರಿಸಿದರೆ ಬೋನು ಇಡುವುದಾಗಿ ಅರಣ್ಯಾಧಿಕಾರಿ ಭರವಸೆ ನೀಡಿದ್ದಾರೆ.
ಶುಕ್ರವಾರ ಸಂಜೆ ಚಿರತೆ ಗಮನಿಸಿದ ಸ್ಥಳೀಯರು ವಿಡಿಯೊ ಚಿತ್ರೀಕರಿಸಿ ಸಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.