ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೆ.ಟಿ.ಹಳ್ಳಿ: ತೋಟದ ಮನೆ ಬೀಗ ಮುರಿದು ಕೃಷಿ ಸಲಕರಣೆ ಕಳವು

Published 20 ಜೂನ್ 2024, 14:04 IST
Last Updated 20 ಜೂನ್ 2024, 14:04 IST
ಅಕ್ಷರ ಗಾತ್ರ

ಪಾವಗಡ: ತಾಲ್ಲೂಕಿನ ನಿಡಗಲ್ ಹೋಬಳಿ ಕೆ.ಟಿ. ಹಳ್ಳಿ ಬಳಿಯ ತೋಟದ ಮನೆಯ ಬೀಗ ಮುರಿದು ಬುಧವಾರ ರಾತ್ರಿ ₹2 ಲಕ್ಷ ಮೌಲ್ಯದ ಕೃಷಿ ಸಲಕರಣೆಗಳನ್ನು ಕದ್ದೊಯ್ಯಲಾಗಿದೆ.

ಗ್ರಾಮದ ಬಳಿ ಕೆ.ನಾಗರಾಜು ಅವರಿಗೆ ಸೇರಿದ ನಿಸರ್ಗ ಫಾರ್ಮ್ ಕಬ್ಬಿಣದ ಬಾಗಿಲನ್ನು ಮುರಿದು ಒಳ ನುಗ್ಗಿರುವ ಕಳ್ಳರು ಕೃಷಿಗಾಗಿ ಬಳಸುತ್ತಿದ್ದ ಟಿಲ್ಲರ್, ಮೋಟರ್, ಎರಡು ಔಷಧಿ ಸಿಂಪಡಣೆ ಯಂತ್ರ, ಎರಡು ಸ್ಟಾರ್ಟರ್‌ಗಳು, ಸ್ಟಾಂಡ್ ಫ್ಯಾನ್ ಇತ್ಯಾದಿ ಸಲಕರಣೆಗಳನ್ನು ಕಳವು ಮಾಡಿದ್ದಾರೆ.

ಮಾಲೀಕ ನಾಗರಾಜು ಚಿಕಿತ್ಸೆಗಾಗಿ ಬೆಂಗಳೂರಿಗೆ ಹೋಗಿದ್ದರು. ಯಾರೂ ಇಲ್ಲದಿರುವುದನ್ನು ಗಮನಿಸಿ ಕಳ್ಳತನ ಮಾಡಲಾಗಿದೆ.

ಕೊಠಡಿ ಬಾಗಿಲು ಮುರಿಯಲಾಗದೆ ಚಾವಣಿಯಿಂದ ಇಳಿದು ಸಲಕರಣೆಗಳನ್ನು ಕದ್ದೊಯ್ಯಲಾಗಿದೆ. ಅರಸೀಕೆರೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT