ನವದೆಹಲಿ: ತುಮಕೂರು ಜಿಲ್ಲೆಯಲ್ಲಿ ಮತ್ತೆ ಎರಡು ರಸ್ತೆ ಕೆಳ ಸೇತುವೆ (ಆರ್‌ಯುಬಿ) ಹಾಗೂ ಒಂದು ರಸ್ತೆ ಮೇಲ್ಸೇತುವೆಯನ್ನು (ಆರ್‌ಒಬಿ) ರೈಲ್ವೆ ಇಲಾಖೆ ಮಂಜೂರು ಮಾಡಿದೆ.

ಈ ಕಾಮಗಾರಿಗಳ ಮೊತ್ತ ₹60 ಕೋಟಿ. ಕಾಮಗಾರಿಯ ಸಂಪೂರ್ಣ ವೆಚ್ಚವನ್ನು ರೈಲ್ವೆ ಇಲಾಖೆ ಭರಿಸಲಿದೆ ಎಂದು ರೈಲ್ವೆ ಹಾಗೂ ಜಲಶಕ್ತಿ ಖಾತೆಯ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

₹13.44 ಕೋಟಿ ವೆಚ್ಚದಲ್ಲಿ ಕಲ್ಲಿಪಾಳ್ಯ ರಸ್ತೆಯಲ್ಲಿ ಕೆಳ ಸೇತುವೆ, ₹36.62 ಕೋಟಿ ವೆಚ್ಚದಲ್ಲಿ ಬೆಂಚಗೆರೆ ಗೇಟ್‌ನಲ್ಲಿ ರಸ್ತೆ ಮೇಲ್ಸೇತುವೆ ಹಾಗೂ ಬಂಡಿಹಳ್ಳಿ ರೋಡ್ ಗೇಟ್‌ನಲ್ಲಿ ₹10 ಕೋಟಿ ವೆಚ್ಚದಲ್ಲಿ ರಸ್ತೆ ಕೆಳ ಸೇತುವೆ ನಿರ್ಮಿಸಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

ಐದು ಕಡೆಗಳಲ್ಲಿ ₹350 ಕೋಟಿ ವೆಚ್ಚದಲ್ಲಿ ರಸ್ತೆ ಮೇಲ್ಸೇತುವೆ ಕಾಮಗಾರಿಗಳನ್ನು ರೈಲ್ವೆ ಇಲಾಖೆ ಜುಲೈ 15ರಂದು ಮಂಜೂರು ಮಾಡಿತ್ತು. ಈ ಯೋಜನೆಗಳ ಅನುಷ್ಠಾನಕ್ಕೆ ಭೂ ಸ್ವಾಧೀನಕ್ಕೆ ತಕ್ಷಣ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
.ತುಮಕೂರು | ಹೊಸ ಮೆಮು ರೈಲು ಸಂಚಾರ ಆರಂಭ: ವಿ.ಸೋಮಣ್ಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.