3ರಂದು ರೈಲ್ವೆ ನಿಲ್ದಾಣದಲ್ಲಿ ರೈಲಿನ ಜನ್ಮದಿನಾಚರಣೆ

7
ತುಮಕೂರು ಬೆಂಗಳೂರು ಫಾಸ್ಟ್ ಪ್ಯಾಸೆಂಜರ್ ರೈಲಿಗೆ 5ನೇ ವರ್ಷದ ಸಂಭ್ರಮ

3ರಂದು ರೈಲ್ವೆ ನಿಲ್ದಾಣದಲ್ಲಿ ರೈಲಿನ ಜನ್ಮದಿನಾಚರಣೆ

Published:
Updated:

ತುಮಕೂರು: ಶುಕ್ರವಾರ (ಆಗಸ್ಟ್ 3ರಂದು) ಬೆಳಿಗ್ಗೆ ನಗರದ ರೈಲ್ವೆ ನಿಲ್ದಾಣದಲ್ಲಿ ಜನ್ಮದಿನಾಚರಣೆಯ ಸಂಭ್ರಮ. ಇದು ಯಾವುದೊ ಪುಟ್ಟ ಮಗು, ವ್ಯಕ್ತಿಗಳ, ಗಣ್ಯ ವ್ಯಕ್ತಿಗಳ ಜನ್ಮದಿನವಲ್ಲ.

ತುಮಕೂರು–ಬೆಂಗಳೂರು ಫಾಸ್ಟ್ ಪ್ಯಾಸೆಂಜರ್ ರೈಲಿನ 5ನೇ ಜನ್ಮದಿನಾಚರಣೆ. ಹಬ್ಬದ ಸಡಗರವೇ ಅಲ್ಲಿ ಮನೆ ಮಾಡಿರುತ್ತದೆ.

ತುಮಕೂರು–ಬೆಂಗಳೂರು ರೈಲ್ವೆ ಪ್ರಯಾಣಿಕರ ವೇದಿಕೆಯು ಪ್ರತಿ ವರ್ಷದಂತೆ ಈ ವರ್ಷವೂ ಕಾರ್ಯಕ್ರಮ ಮಾಡುತ್ತಿದೆ. ಬೆಳಿಗ್ಗೆ 7.30ಕ್ಕೆ ಕಾರ್ಯಕ್ರಮ ನಡೆಯಲಿದ್ದು, ರೈಲಿನ ಚಾಲಕರು ಕೇಕ್ ಕತ್ತರಿಸುವರು.

ತುಮಕೂರು ರೈಲು ನಿಲ್ದಾಣ ಅಧಿಕಾರಿಗಳು, ರೈಲ್ವೆ ರಕ್ಷಣಾ ಸಿಬ್ಬಂದಿ ಹಾಗೂ ವೇದಿಕೆಯ ಪದಾಧಿಕಾರಿಗಳು, ಸದಸ್ಯರು, ರೈಲ್ವೆ ಪ್ರಯಾಣಿಕರು ಭಾಗವಹಿಸಲಿದ್ದಾರೆ ಎಂದು ರೈಲ್ವೆ ಪ್ರಯಾಣಿಕರ ವೇದಿಕೆಯ ಕಾರ್ಯದರ್ಶ ಕರಣಂ ರಮೇಶ್ ತಿಳಿಸಿದ್ದಾರೆ.

 

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !