ಭಾನುವಾರ, ಏಪ್ರಿಲ್ 5, 2020
19 °C

‘ಹೊಗೆಯಿಂದ ಟೋಲ್‌ ಕಾರ್ಮಿಕ ಸಾವು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಕ್ಯಾತ್ಸಂದ್ರ ಜಾಸ್‌ಟೋಲ್‌ನಲ್ಲಿ ದುಡಿಯುತ್ತಿದ್ದ ಚಕ್ಕೇನಹಳ್ಳಿಯ ನವೀನ್‌ ಶಂಕರ್‌(47) ಗುರುವಾರ ಮೃತಪಟ್ಟರು.

ನವೀನ್ ಶಂಕರ್‌ 13 ವರ್ಷಗಳಿಂದ ಟೋಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ನಿತ್ಯ ವಾಹನಗಳ ಹೊಗೆ ಕುಡಿದು ಅವರಿಗೆ ಕ್ಷಯ ರೋಗ ಬಂದಿತ್ತು. ಅವರ ಕುಟುಂಬಕ್ಕೆ ಟೋಲ್‌ ಕಂಪನಿ ಸೂಕ್ತ ಪರಿಹಾರ ನೀಡಬೇಕು ಎಂದು ಚಕ್ಕೇನಹಳ್ಳಿಯ ಗ್ರಾಮಸ್ಥರು ಹಾಗೂ ಟೋಲ್‌ ಸಿಬ್ಬಂದಿಯು ಟೋಲ್‌ ಕಚೇರಿಯಲ್ಲಿಯೇ ಶವವಿಟ್ಟು ಗುರುವಾರ ಪ್ರತಿಭಟನೆ ಮಾಡಿದರು.

ಆರಂಭದಲ್ಲಿ ಪ್ರತಿಭಟನೆಗೆ ಕಂಪನಿಯ ಪ್ರತಿನಿಧಿಗಳು ಕಿವಿಗೊಡಲಿಲ್ಲ. ಆಗ ಕಾರ್ಮಿಕರು ಟೋಲ್‌ ಗೇಟ್‌ಗಳನ್ನು ತೆರೆದಿಟ್ಟು, ಚಾಲಕರು ಟೋಲ್‌ ಪಾವತಿಸದೇ ಹೋಗಲು ಅನುವು ಮಾಡಿಕೊಟ್ಟರು.

ಕಾರ್ಮಿಕರ ಒತ್ತಾಯಕ್ಕೆ ಮಣಿದು ಕಂಪನಿಯು ₹4 ಲಕ್ಷ ಪರಿಹಾರ ನೀಡಲು ಒಪ್ಪಿಕೊಂಡಿತು.

ಪ್ರತಿಭಟನೆಯಲ್ಲಿದ್ದ ಜಿಲ್ಲಾ ಪಂಚಾಯಿತಿ ಸದಸ್ಯ ಹುಚ್ಚಯ್ಯ ಅವರು ಮಾತನಾಡಿ, ಟೋಲ್‌ನ ಸಿಬ್ಬಂದಿಯ ಆರೋಗ್ಯ ರಕ್ಷಣೆಗೆ ಅಗತ್ಯ ಪರಿಕರಗಳನ್ನು ಒದಗಿಸಬೇಕು. ಕಾರ್ಮಿಕ ಕಾಯ್ದೆ ಪ್ರಕಾರ ಸಿಗಬೇಕಾದ ಸೌಲಭ್ಯಗಳನ್ನು ನೀಡಬೇಕು. ಆರೋಗ್ಯ ವಿಮೆ, ಜೀವ ವಿಮೆ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)