ಪಟ್ಟಣ ಸೇರಿದಂತೆ ತಾಲ್ಲೂಕಿನ ಹಲವೆಡೆ ಅಧಿಕಾರಿಗಳು ವಾಹನಗಳನ್ನು ತಡೆದು ಪರೀಕ್ಷಿಸುತ್ತಾರೆ. ಹೊಗೆ ತಪಾಸಣೆ ಮಾಡಿಸದ ವಾಹನಗಳಿಗೆ ದಂಡ ಹಾಕುತ್ತಾರೆ. ಆದರೆ ಸರ್ಕಾರಿ ಬಸ್‌ಗಳು ನಿತ್ಯ ಹೊಗೆ ಸೂಸುತ್ತಲೇ ಓಡಾಡುತ್ತಿದ್ದರೂ ಕ್ರಮವಹಿಸಲ್ಲ ಏಕೆ?
ಸಿ.ಡಿ.ಪ್ರಭಾಕರ ಶಿಕ್ಷಕ
ಸರ್ಕಾರಿ ಬಸ್‌ಗಳನ್ನು ಸಕಾಲದಲ್ಲಿ ಸರ್ವಿಸ್ ಮಾಡದ ಕಾರಣ ಹೆಚ್ಚು ಹೊಗೆ ಸೂಸುವ ಹಂತಕ್ಕೆ ತಲುಪುತ್ತವೆ. ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷವೇ ಇದಕ್ಕೆ ಕಾರಣ. ಕಾನೂನು ಎಲ್ಲರಿಗೂ ಒಂದೆ. ಆದರೆ ಸರ್ಕಾರಿ ವಾಹನಗಳಲ್ಲಿ ನಿಯಮ ಪಾಲನೆಯಾಗುತ್ತಿಲ್ಲ.