ಭಾನುವಾರ, ಏಪ್ರಿಲ್ 2, 2023
33 °C

ಚಿಕ್ಕನಾಯಕನಹಳ್ಳಿ: ಬೈಕ್‌ನಿಂದ ಬಿದ್ದು ಮಹಿಳೆ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಗ್ಯಾರೇಹಳ್ಳಿ ಬಳಿ ರಸ್ತೆ ಉಬ್ಬು ದಾಟುವಾಗ ಸ್ಕೂಟರ್‌ನಿಂದ ಆಯತಪ್ಪಿ ಬಿದ್ದು ಮಹಿಳೆ ಗುರುವಾರ ಮೃತಪಟ್ಟಿದ್ದಾರೆ.

ಮೃತರು ತಾಲ್ಲೂಕಿನ ಕುಪ್ಪೂರು ನಿವಾಸಿ ಕುಮಾರಯ್ಯ ಪತ್ನಿ ವಿಜಯಮ್ಮ.

ಗೃಹ ಪ್ರವೇಶಕ್ಕೆಂದು ಸ್ಕೂಟರ್‌ನಲ್ಲಿ ಪತಿಯೊಂದಿಗೆ ಗುಬ್ಬಿಗೆ ತೆರಳುತ್ತಿದ್ದಾಗ ಅವಘಡ ಸಂಭವಿಸಿದೆ.

ರಸ್ತೆಯ ಉಬ್ಬು ದಾಟುವಾಗ ಸ್ಕೂಟರ್ ನಿಯಂತ್ರಣ ತಪ್ಪಿ ಬಿದ್ದಿದೆ. ಹಿಂದಿನ ಸೀಟಿನಲ್ಲಿ ಕುಳಿತಿದ್ದ ವಿಜಯಮ್ಮ ಗಾಯಗೊಂಡಿದ್ದರು. ಅವರನ್ನು ಬೆಂಗಳೂರಿನ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲೇ ಸಾವನ್ನಪ್ಪಿದ್ದಾರೆ.

ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೇಗುಲದಲ್ಲಿ ಕಳವು

ತಾಲ್ಲೂಕಿನ ತಿಮ್ಮನಹಳ್ಳಿ ಆಂಜನೇಯ ದೇವಾಲಯ, ಸಿದ್ದನಕಟ್ಟೆಯ ಶ್ರೀನಿವಾಸ ದೇವಾಲಯದಲ್ಲಿ ಬುಧವಾರ ರಾತ್ರಿ ಕಳ್ಳತನ ನಡೆದಿದೆ. ತಿಮ್ಮನಹಳ್ಳಿ ದೇವಾಲಯದ ಬಾಗಿಲು ಮುರಿದು ಒಳ ನುಗ್ಗಿರುವ ಕಳ್ಳರು ಆಂಜನೇಯ, ಲಕ್ಷ್ಮಿದೇವರ ಬೆಳ್ಳಿಯ ಪೂಜಾ ಸಾಮಾನುಗಳು, ವಿಗ್ರಹದ ಕೊರಳಲ್ಲಿದ್ದ ಸರ, ತಾಳಿ ಕಳವು ಮಾಡಿದ್ದಾರೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು