ತುರುವೇಕೆರೆ: ಸರ್ಕಾರಿ ಉದ್ಯೋಗ ತರಬೇತಿ ಕೇಂದ್ರದ ಆಡಳಿತ ಮಂಡಳಿ ಪ್ರತಿ ಪಾವತಿ ಸೀಟ್ಗೆ ರೂ 15 ಸಾವಿರ ವಂತಿಗೆ ನಿಗದಿ ಪಡಿಸಿದೆ. ಈ ಬೆಳವಣಿಗೆಯಿಂದ ಹಲವು ಬಡ ವಿದ್ಯಾರ್ಥಿಗಳು ಅವಕಾಶ ವಂಚಿತರಾಗುವ ಸಂಭವವಿದೆ ಎಂದು ಪೋಷಕರು ದೂರಿದ್ದಾರೆ.

ಸ್ಥಳೀಯ ಸರ್ಕಾರಿ ಉದ್ಯೋಗ ಕೇಂದ್ರದಲ್ಲಿ ಈಗಾಗಲೇ ಮೆರಿಟ್ ಆಧಾರದ ಮೇಲೆ ನಾಲ್ಕು ವಿಭಾಗಗಲ್ಲಿ ವಿದ್ಯಾರ್ಥಿಗಳಿಗೆ ಸೀಟು ಹಂಚಿಕೆ ಮಾಡಿ ಪ್ರವೇಶ ನೀಡಲಾಗುತ್ತಿದೆ.

ಸರ್ಕಾರ ನಿಗದಿಪಡಿಸಿರುವ ಶುಲ್ಕ ಕೇವಲ ರೂ 1200. ಆದರೆ ಸರ್ಕಾರ ನಾಲ್ಕು ವಿಭಾಗಗಳಿಂದ ಒಟ್ಟಾರೆ 21 ಸೀಟುಗಳ ಪ್ರವೇಶವನ್ನು ಸಾಂಸ್ಥಿಕ ಆಡಳಿತ ಮಂಡಳಿ ವಿವೇಚನೆಗೆ ಬಿಟ್ಟಿದೆ.

ಉದ್ಯೋಗ ಕೇಂದ್ರದ ಆಡಳಿತ ಮಂಡಳಿ ಪ್ರತಿ ಪಾವತಿ ಸೀಟಿಗೆ ರೂ 15 ಸಾವಿರ ವಂತಿಗೆ ಹಾಗೂ ರೂ 1200 ಶುಲ್ಕ ನಿಗದಿಪಡಿಸಿದೆ.
ಐಟಿಐಗೆ ಸೇರುವ ಬಹುತೇಕ ವಿದ್ಯಾರ್ಥಿಗಳು ಬಡ ಕುಟುಂಬಗಳಿಂದ ಬಂದವರೇ ಆಗಿರುತ್ತಾರೆ. ಸರ್ಕಾರಿ ಕೋಟಾದಡಿ ಸೀಟು ಸಿಗದೆ ಅವಕಾಶ ವಂಚಿತರಾದವರಿಗೆ ಐಎಂಸಿ ಒಂದಿಷ್ಟು ದೇಣಿಗೆ ಪಡೆದು ಅಥವಾ ಪಡೆಯದೆಯೇ ಸೀಟು ನೀಡಬಹುದು. ಆದರೆ ಪ್ರತಿ ಸೀಟ್ಗೆ ರೂ 15 ಸಾವಿರ ವಂತಿಗೆ ನಿಗದಿಪಡಿಸಿರುವುದು ಅವೈಜ್ಞಾನಿಕ. ಇದರಿಂದ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ ಎಂದು ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೊದಲ ವರ್ಷ ಆಡಳಿತ ಮಂಡಳಿ ಈ ಸೀಟುಗಳನ್ನು ಉಚಿತವಾಗಿಯೇ ನೀಡಿತ್ತು. ನಂತರ ಪ್ರತಿ ಸೀಟ್ಗೆ 3-4 ಸಾವಿರ ನಿಗದಿ ಮಾಡಿತ್ತು. ಈಗ ಏಕಾಏಕಿ ರೂ 15 ಸಾವಿರ ನಿಗಧಿ ಮಾಡಲಾಗಿದೆ. 21 ಸೀಟುಗಳಿಗೆ 24 ವಿದ್ಯಾರ್ಥಿಗಳು ಅರ್ಜಿ ಪಡೆದಿದ್ದು ಕೇವಲ ಐವರು ಮಾತ್ರ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಸಲು ಶನಿವಾರ (ಜೂನ್ 15) ಕೊನೆಯ ದಿನ.

ಇದು ಸರ್ಕಾರಿ ಸಂಸ್ಥೆ. ಐಎಂಸಿಯಿಂದ ಕೋಟ್ಯಂತರ ರೂಪಾಯಿ ಹಣ ಬರುತ್ತದೆ. ಹೀಗಿರುವಾಗ ದುಬಾರಿ ವಂತಿಗೆ ವಸೂಲಿ ಮಾಡುವ ಅಗತ್ಯವಾದರೂ ಏನು? ಎಂದು ನಾಗರಿಕರು ಪ್ರಶ್ನಿಸುತ್ತಾರೆ.

ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಿ ಅರ್ಹ ವಿದ್ಯಾರ್ಥಿಗಳಿಗೆ ಕಡಿಮೆ ದರದಲ್ಲಿ ಪ್ರವೇಶ ಪಡೆಯಲು ಅನುಕೂಲ ಮಾಡಿಕೊಡಬೇಕು. ಇಲ್ಲವೇ ಎಲ್ಲ ಸೀಟ್ಗಳನ್ನು ಮೆರಿಟ್ ಆಧಾರದ ಮೇಲೆಯೇ ಭರ್ತಿ ಮಾಡಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.