ಕುಂದಾಪುರ: ರೈತರ ಪರವಾಗಿರುವ ಕ್ಯಾಂಪ್ಕೊ ಸಂಸ್ಥೆ ಲಾಭದ ಜತೆ ಸಾರ್ವಜನಿಕ ಸೇವೆ, ರೈತರಿಗೆ ಸಹಕಾರ ಮಾಡುತ್ತಿದೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಎ. ಕಿಶೋರ್ ಕುಮಾರ್ ಕೊಡ್ಗಿ ಹೇಳಿದರು.

ಅವರು ಸೋಮವಾರ ಇಲ್ಲಿನ ಎಪಿಎಂಸಿ ಪ್ರಾಂಗಣದಲ್ಲಿ ಕ್ಯಾಂಪ್ಕೊದ ಕುಂದಾಪುರ ಶಾಖೆಯ ನವೀಕೃತ ಕಚೇರಿ, ಗೋದಾಮು ಕಟ್ಟಡದ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ರೈತರ ಸಹಭಾಗಿತ್ವ ಇಲ್ಲದೆ ಯಾವುದೇ ಸಹಕಾರಿ ಸಂಸ್ಥೆ ಅಭಿವೃದ್ಧಿ ಕಾಣುವುದಿಲ್ಲ. ಕ್ಯಾಂಪ್ಕೊ ಜತೆ ವ್ಯವಹಾರ ಮಾಡಿ ಸೌಲಭ್ಯಗಳನ್ನು ಬಳಸಿಕೊಂಡು ರೈತರು ತಾವೂ ಬೆಳೆದು ಸಂಸ್ಥೆಯನ್ನೂ ಬೆಳೆಸಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಎ. ಕಿರಣ್ ಕುಮಾರ್ ಕೊಡ್ಗಿ ಮಾತನಾಡಿದರು.

ಕ್ಯಾಂಪ್ಕೊ ವ್ಯವಸ್ಥಾಪನಾ ನಿರ್ದೇಶಕ ಡಾ.ಬಿ.ವಿ. ಸತ್ಯನಾರಾಯಣ ಮಾತನಾಡಿ, ಸಂಸ್ಥೆ ಕಳೆದ ವರ್ಷ ₹3,632 ಕೋಟಿ ವ್ಯವಹಾರ ಮಾಡಿ ₹49 ಕೋಟಿ ಲಾಭ ಮಾಡಿದೆ. ಅಡಿಕೆಗೆ ಕೆ.ಜಿ.ಗೆ ₹2, ಕೊಕ್ಕೊಗೆ ₹6, ಹಸಿಬೀಜಕ್ಕೆ ₹4 ಪ್ರೋತ್ಸಾಹಧನ ನೀಡಿದ್ದು, ಕ್ಯಾಂಪ್ಕೊ ಇತಿಹಾಸದಲ್ಲೇ ಮೊದಲು. ಈ ವರ್ಷ 30,400 ಟನ್ ಅಡಿಕೆ ಖರೀದಿಸಲಾಗಿದ್ದು, ಕಳೆದ ವರ್ಷಕ್ಕಿಂತ 1 ಸಾವಿರ ಟನ್ ಹೆಚ್ಚು. 880 ಮೆಟ್ರಿಕ್ ಟನ್ ರಬ್ಬರ್, 857 ಮೆಟ್ರಿಕ್ ಟನ್ ಕಾಳುಮೆಣಸು ಖರೀದಿಸಲಾಗಿದೆ. 6,435 ಟನ್ ಚಾಕೊಲೇಟ್ ಉತ್ಪನ್ನಗಳನ್ನು ತಯಾರಿಸಲಾಗಿದೆ. ಕಳೆದ ವರ್ಷ 5,684 ಮೆಟ್ರಿಕ್ ಟನ್ ಉತ್ಪಾದನೆಯಾಗಿತ್ತು. ಕನಿಷ್ಠ 100 ಕೆ.ಜಿ. ಅಡಿಕೆ ನೀಡುವ ರೈತರಿಗೆ ವೈದ್ಯಕೀಯ ನೆರವು ದೊರೆಯುತ್ತದೆ ಎಂದರು.

ಕ್ಯಾಂಪ್ಕೊ ಉಪಾಧ್ಯಕ್ಷ ಶಂ.ನಾ.ಖಂಡಿಗೆ, ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ಟಿಎಪಿಸಿಎಂಎಸ್ ಅಧ್ಯಕ್ಷ ಎಚ್. ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ನಿರ್ದೇಶಕರಾದ ಎಸ್.ಆರ್. ಸತೀಶ್ಚಂದ್ರ, ದಯಾನಂದ ಹೆಗ್ಡೆ, ಶಂಭುಲಿಂಗ ಜಿ. ಹೆಗಡೆ, ಕೆ. ಬಾಲಕೃಷ್ಣ ರೈ, ಜಯರಾಮ ಸರಳಾಯ, ಪದ್ಮರಾಜ ಪಟ್ಟಾಜೆ, ಎಂ. ಮಹೇಶ ಚೌಟ, ರಾಘವೇಂದ್ರ ಭಟ್, ಡಾ.ಜಯಪ್ರಕಾಶ ನಾರಾಯಣ ಟಿ.ಕೆ, ರಾಧಾಕೃಷ್ಣನ್, ಸತ್ಯನಾರಾಯಣ ಪ್ರಸಾದ್, ಸುರೇಶ್ ಕುಮಾರ್ ಶೆಟ್ಟಿ, ಮಹಾಪ್ರಬಂಧಕಿ ರೇಶ್ಮಾ ಮಲ್ಯ, ಉಪ ಮಹಾಪ್ರಬಂಧಕ ಗೋವಿಂದ ಭಟ್, ಸರ್ಕಾರಿ ಆಸ್ಪತ್ರೆ ಆಡಳಿತ ಶಸ್ತ್ರಚಿಕಿತ್ಸಕ ವೈದ್ಯಾಧಿಕಾರಿ ಡಾ.ಚಂದ್ರ ಮರಕಾಲ ಭಾಗವಹಿಸಿದ್ದರು. ಮುಖ್ಯ ಪ್ರಬಂಧಕ ಚಂದ್ರ ವಿ. ಅಮೀನ್ ನಿರ್ವಹಿಸಿದರು.