ಮಂಗಳವಾರ, ಮಾರ್ಚ್ 21, 2023
22 °C

ಗದ್ದೆಗೆ ಉರುಳಿದ ಕಾರು: ಚಾಲಕ ಪಾರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೆಬ್ರಿ: ಕಾರ್ಕಳ ತಾಲ್ಲೂಕಿನ ಮರ್ಣೆ ಗ್ರಾಮದ ಎಣ್ಣೆಹೊಳೆ ಹಂಚಿಕಟ್ಟೆ ಪಡ್ಡೆಲುಮಾರು ಎಂಬಲ್ಲಿ ಎರ್ಟಿಗಾ ಕಾರೊಂದು ಗದ್ದೆಗೆ ಉರುಳಿದ ಘಟನೆ ಬಾನುವಾರ ನಡೆದಿದೆ. ಚಾಲಕ ಅಪಾಯದಿಂದ ಪಾರಾಗಿದ್ದಾರೆ.

ಅಜೆಕಾರಿನ ಉದ್ಯಮಿಯೊರ್ವರಿಗೆ ಸೇರಿದ ವಾಹನವಾಗಿದ್ದು ಕಾರ್ಕಳದಿಂದ ಅಜೆಕಾರಿಗೆ ಹೋಗುತ್ತಿತ್ತು. ಧಾರಾಕಾರವಾಗಿ ಸುರಿಯುತಿದ್ದ ಮಳೆಯಿಂದಾಗಿ ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಅಪಾಯಕಾರಿ ತಿರುವು: ಪಡ್ಡೆಲುಮಾರು ತಿರುವು ಅಪಾಯಕಾರಿಯಾಗಿದ್ದು, ಕೆಲವು ಸಮಯಗಳಿಂದ ಸರಣಿ ಅಪಘಾತ ‌ನಡೆದಿದ್ದು ಕಳೆದೆರಡು ವರ್ಷಗಳ ಹಿಂದೆ ₹1 ಕೋಟಿ ವೆಚ್ಚದಲ್ಲಿ ರಸ್ತೆಯನ್ನು ವಿಸ್ತರಣೆ ಮಾಡಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು