ಉಡುಪಿ: ಕುಡಿದ ಮತ್ತಿನಲ್ಲಿ ಮಣಿಪಾಲದ ಬ್ಯಾರೆಲ್ಸ್ ಪಬ್ ನೌಕರನ ಕಾಲಿನ ಮೇಲೆ ಕಾರು ಹರಿಸಿ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ ಎರಡು ಕಾರುಗಳಿಗೆ ಡಿಕ್ಕಿ ಹೊಡೆದ ಚಾಲಕ ಸುಹಾಸ್ ಎಂಬಾತನ ವಿರುದ್ಧ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿ ಸುಹಾಸ್ ಐಟಿ ಉದ್ಯೋಗದಲ್ಲಿರುವ ಗೆಳೆಯರೊಂದಿಗೆ ಸಂಬಂಧಿಕರ ಮದುವೆಗೆಂದು ಉಡುಪಿಗೆ ಬಂದಿದ್ದು ಶನಿವಾರ ರಾತ್ರಿ ಮಣಿಪಾಲದ ಬ್ಯಾರೆಲ್ಸ್ ಪಬ್ಗೆ ತೆರಳಿದ್ದರು. ಬಳಿಕ ಪಬ್ನಿಂದ ವಾಪಸ್ ಹೋಗುವಾಗ ಅಜಾಗರೂಕತೆಯಿಂದ ಕಾರು ಚಲಾಯಿಸಿದ ಸುಹಾಸ್ ಪಬ್ ನೌಕರನ ಕಾಲಿನ ಮೇಲೆ ಕಾರು ಹರಿಸಿ ಸ್ಕೊಡಾ ಹಾಗೂ ಫಾರ್ಚುನರ್ ಕಾರಿಗೆ ಡಿಕ್ಕಿ ಹೊಡೆದಿದ್ದರು.

ಘಟನೆಯಲ್ಲಿ ಎರಡೂ ಕಾರುಗಳು ಜಖಂಗೊಂಡಿವೆ. ಫಾರ್ಚುನರ್ ಕಾರು ಮಾಲೀಕ ರೋಷನ್ ನೀಡಿದ ದೂರಿನಂತೆ ಆರೋಪಿ ಸುಹಾಸ್ನನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ವಿಚಾರಣೆ ನಡೆಸಿದ್ದು, ಸ್ನೇಹಿತರನ್ನು ಪರೀಕ್ಷೆಗೊಳಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.