ಶನಿವಾರ, ಜೂನ್ 6, 2020
27 °C

ಮದುವೆ ಮನೆಗಳಲ್ಲೂ ಹೊಸ ವಿನ್ಯಾಸದ ಮಾಸ್ಕ್, ಭಾರಿ ಬೇಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರ್ವ: ಕೋವಿಡ್-19 ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಪರಸ್ಪರ ಸಾಮಾಜಿಕ ಅಂತರ ಕಾಪಾಡುವುದರೊಂದಿಗೆ ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದು, ಮಾರುಕಟ್ಟೆಗಳಲ್ಲಿ ಇದೀಗ ವಿವಿಧ ಫ್ಯಾಷನ್‍ಗಳ ಮಾಸ್ಕ್‌ಗಳು ಬರಲಾರಂಭಿಸಿವೆ. ಭಾರಿ ಬೇಡಿಕೆಯೂ ಇದೆ.

ಶುಭ ಸಮಾರಂಭಗಳಿಲ್ಲದೆ ಕೆಲಸವಿಲ್ಲದೆ ಇದ್ದ ಅನೇಕ ಟೈಲರ್‌ಗಳು ವಿಭಿನ್ನ ವಿನ್ಯಾಸಗಳ ಮಾಸ್ಕ್‌ಗಳ ತಯಾರಿ ಕೆಲಸದಲ್ಲೂ ಬ್ಯುಸಿಯಾಗಿದ್ದಾರೆ. 

ಮದುವೆ ಮನೆಗಳಲ್ಲೂ ಕೂಡಾ ಹೊಸ ಹೊಸ ಮಾದರಿಯ ಮಾಸ್ಕ್ ವಿತರಿಸುವ ಕಾರ್ಯ ನಡೆಯುತ್ತಿದೆ. ವಿಶಿಷ್ಟ ಶೈಲಿ, ಸಂದೇಶ ಸಾರುವ ಮಾಸ್ಕ್‌ಅನ್ನು ಮದುವೆ ಮನೆಯಲ್ಲಿ ವಿತರಿಸಲು ಸಿದ್ಧಪಡಿಸಲಾಗುತ್ತಿದೆ. ಮಾಸ್ಕ್‌ಗಳಲ್ಲಿ ವಧೂವರರ ಛಾಯಾಚಿತ್ರಗಳನ್ನು ಅಚ್ಚು ಹಾಕಿಸಿಕೊಂಡು ಉತ್ತಮ ಗುಣಮಟ್ಟ ಮತ್ತು ಆಕರ್ಷಕ ಮಾಸ್ಕ್ ತಯಾರಿಸಿ ವಿತರಿಸಲಾಗುತ್ತಿದೆ. ಇಂತಃ ಪ್ರಯತ್ನ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜೀಸನ್-ಅಲೀನಾ ಹಾಗೂ ಬಿಬಿನ್-ನವ್ಯಾ ಹೆಸರಿನಲ್ಲಿ ಮಾಸ್ಕ್ ತಯಾರಿಸಿ ಮದುವೆಯಲ್ಲಿ ಭಾಗವಹಿಸುವ ಎಲ್ಲರಿಗೂ ನೀಡಲು ಅದರಲ್ಲಿ ಉದ್ದೇಶಿಸಲಾಗಿದೆ.

ವಿವಿಧ ಬಟ್ಟೆ ಅಂಗಡಿಗಳಲ್ಲಿ ಹಿಂದೆಲ್ಲ ಗ್ರಾಹಕರಿಗೆ ಕರವಸ್ತ್ರಗಳನ್ನು ಉಚಿತವಾಗಿ ನೀಡುವ ಪರಿಪಾಠವಿತ್ತು. ಇದೀಗ ಗ್ರಾಹಕರೆಲ್ಲರಿಗೂ ಪ್ರತಿನಿತ್ಯ ಬಟ್ಟೆಯ ಮಾಸ್ಕ್‌ಗಳನ್ನು ವಿತರಿಸಲಾಗುತ್ತಿದೆ. ಉದ್ಯಾವರ ಜಯಲಕ್ಷ್ಮೀ ಸಿಲ್ಕ್ಸ್ ಜವಳಿ ಮಳಿಗೆಯಲ್ಲಿ ಸಾವಿರಾರು ಮಾಸ್ಕ್‌ಗಳನ್ನು ಸಂಸ್ಥೆಯ ಸಿಬ್ಬದಿ ತಯಾರಿಸಿ, ಉಚಿತವಾಗಿ ವಿತರಿಸಲಾಗುತ್ತಿದೆ. ಉತ್ತಮಗುಣಮಟ್ಟದ ಮಾಸ್ಕ್‌ಗಳು ದೊರಕುತ್ತಿರುವುದರಿಂದ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಯೂ ವ್ಯಕ್ತವಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು