ಕುಂದಾಪುರ: ಕೋಟೇಶ್ವರದ ನೀರೇಶ್ವಾಲ್ಯ ಮಹಾಲಿಂಗೇಶ್ವರ ಸಾಂಸ್ಕೃತಿಕ ಸಂಘ ದೊಡ್ಡೋಣಿ ವತಿಯಿಂದ ಕೋಟೀಲಿಂಗೇಶ್ವರ ದೇವರ ಅಮಾವಾಸ್ಯೆ ಸ್ನಾನ ಹಾಗೂ ದೀಪಾವಳಿ ಪ್ರಯುಕ್ತ ಸ್ಥಳೀಯರಿಗಾಗಿ ದೇವರು ಬರುವ ದಾರಿಯಲ್ಲಿ ‘ಅಂದದ ರಂಗೋಲಿ ಚಂದದ ತೋರಣ’ ಸ್ಪರ್ಧೆ ಆಯೋಜಿಸಲಾಗಿತ್ತು.

ರಂಗೋಲಿಯಲ್ಲಿ 88ಕ್ಕೂ ಹೆಚ್ಚು ಸ್ಪರ್ಧಿಗಳು, ತೋರಣ ಸ್ಪರ್ಧೆಯಲ್ಲಿ 15 ತಂಡಗಳು ಭಾಗವಹಿಸಿದ್ದರು. ಎಲ್ಲಾ ಸ್ಪರ್ಧಿಗಳಿಗೂ 2 ಹಣತೆ, ರಂಗೋಲಿ ಪುಡಿ ವಿತರಿಸಿ ಗೌರವಿಸಲಾಯಿತು.

ಬಹುಮಾನ ವಿಜೇತರು: ರಂಗೋಲಿ ಸ್ಪರ್ಧೆಯಲ್ಲಿ ವೈಷ್ಣವಿ ಹಾಗೂ ಬಳಗ ಪ್ರಥಮ, ಕೃತಿ ಮತ್ತು ಅಥಿತಿ ದ್ವೀತಿಯ, ಕುಮಾರ್ ಐತಾಳ್ ತೃತೀಯ, ತೋರಣ ಸ್ಪರ್ಧೆಯಲ್ಲಿ ಎಸ್ಎನ್ಎಂ ಚೆಂಡೆ ಬಳಗ ಪ್ರಥಮ, ಹರೀಶ್ ಮತ್ತು ತಂಡ ದ್ವೀತಿಯ ಬಹುಮಾನ ಪಡೆದುಕೊಂಡರು. ಕಲಾವಿದ ಕೃಷ್ಣಮೂರ್ತಿ, ಶಾಂತಿಧಾಮ ಪೂರ್ವ ಗುರುಕುಲದ ನಾಗರತ್ನ ಮಾತಾಜಿ, ರಶ್ಮಿತಾ ದಿನೇಶ್ ವಕ್ವಾಡಿ ತೀರ್ಪುಗಾರರಾಗಿದ್ದರು.

ಸ್ಪರ್ಧೆಯ ಸಂಘಟಕ ಯೋಗೀಶ್ ದೊಡ್ಡೋಣಿ ಮಾತನಾಡಿ, ‘ಕಲೆ, ಸಂಪ್ರದಾಯ, ಸಂಸ್ಕಾರ, ಸಂಸ್ಕೃತಿ ಉಳಿಸಿ ಬೆಳಸುವ ನಿಟ್ಟಿನಲ್ಲಿ ಹಲವು ವರ್ಷಗಳಿಂದ ಪ್ರತಿ ದೀಪಾವಳಿ ಅಮಾವಾಸ್ಯೆಯಂದು ಕೋಟೇಶ್ವರ ಕೋಟಿಲಿಂಗೇಶ್ವರ ದೇವರು ಸ್ನಾನಕ್ಕೆ ಹೋಗುವ ಸಂದರ್ಭದಲ್ಲಿ ಗ್ರಾಮಸ್ಥರಿಗಾಗಿ ಸ್ಪರ್ಧೆಯನ್ನು ಹಮ್ಮಿಕೊಂಡು ಬರಲಾಗುತ್ತಿದೆ. ದೇವರು ಹೋಗುವ ವೇಳೆ ಕೆಲವು ಮನೆಗಳ ಮುಂದೆ ಮಾತ್ರ ರಂಗೋಲಿ, ತಳಿರು ತೋರಣಗಳು ಕಾಣ ಸಿಗುತ್ತಿದ್ದವು. ಇದೀಗ 100ಕ್ಕೂ ಅಧಿಕ ಮನೆಯವರು ಸ್ಪರ್ಧೆಯಲ್ಲಿ ಭಾಗವಹಿಸಿ ದೇವರ ಅಮಾವಾಸ್ಯೆಯಂದು ಸ್ನಾನದ ಪಾರಂಪರಿಕ ಆಚರಣೆಯನ್ನು ಸಂಭ್ರಮಗೊಳಿಸುತ್ತಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.