ಹೆಬ್ರಿ: ಧರ್ಮಸ್ಥಳವು ನಮ್ಮೆಲ್ಲರ ಪುಣ್ಯಕ್ಷೇತ್ರ. ಯಾರೋ ಷಡ್ಯಂತ್ರ ಮಾಡಿ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾ ಧರ್ಮವನ್ನು ಒಡೆಯುವ ಕೆಲಸ ಮಾಡುತ್ತಿರುವುದು ಖಂಡನೀಯ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯ ಉಡುಪಿ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ ಹೇಳಿದರು.

ಹೆಬ್ರಿಯಲ್ಲಿ ಬುಧವಾರ ನಡೆದ ಧರ್ಮ ಸಂರಕ್ಷಣಾ ಜಾಥಾದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹೆಬ್ರಿ ತಾಣ ಶ್ರೀ ಅರ್ಧನಾರೀಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಕಾಲ್ನಡಿಗೆ ಜಾಥಾದ ಮೂಲಕ ತಾಲ್ಲೂಕು ಕಚೇರಿಗೆ ಭಕ್ತ ಸಮೂಹ ತೆರಳಿ ತಹಶೀಲ್ಧಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿತು.

ಶ್ರೀಕ್ಷೇತ್ರ ಧರ್ಮಸ್ಥಳ ಯೋಜನೆಯ ಉಡುಪಿ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಹರೀಶ ಶೆಟ್ಟಿ ಚೆರ್ಕಾಡಿ ಮಾತನಾಡಿ, ಷಡ್ಯಂತ್ರದ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ ಎಂದರು.

ಜಾಥಾದಲ್ಲಿ ಪ್ರಮುಖರಾದ ನವೀನ್ ಚಂದ್ರ ಶೆಟ್ಟಿ, ನರೇಂದ್ರ ನಾಯಕ್, ಸುರೇಶ ಶೆಟ್ಟಿ, ಸುರೇಶ ಭಂಡಾರಿ, ಪಾಂಡುರಂಗ ಪೂಜಾರಿ, ಅಂಡಾರು ಮಹಾವೀರ ಹೆಗ್ಡೆ, ಶಾಂತಿರಾಜ್ ಜೈನ್, ದೇವೇಂದ್ರ ಕಾಮತ್, ಮಂಜುನಾಥ ಪೂಜಾರಿ ಮುದ್ರಾಡಿ, ರಮೇಶ್ ಪೂಜಾರಿ, ಬಿ ಹರ್ಷ ಶೆಟ್ಟಿ, ಯಶೋದ ಶೆಟ್ಟಿ, ಜ್ಯೋತಿ ಉದಯ್, ಶಾಲಿನಿ ಭಂಡಾರಿ, ಹೆಬ್ರಿ ಸತೀಶ್ ಪೈ, ಹೆಬ್ರಿ ಭಾಸ್ಕರ್ ಜೋಯಿಸ್, ವೀಣಾ ಪ್ರಭು, ಬೇಳಂಜೆ ಹರೀಶ್ ಪೂಜಾರಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.