ಹಿರಿಯಡ್ಕ: ಕೊಂಡಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದು ವಾರ ನಡೆದ ಕರ್ನಾಟಕ ಪಬ್ಲಿಕ್ ಸ್ಕೂಲ್ನ ಪದವಿಪೂರ್ವ ವಿಭಾಗದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ ಈಚೆಗೆ ನಡೆಯಿತು.

ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ದಿವಾಕರ ಭಂಡಾರಿ ಮಾತನಾಡಿ, ಯುವಕರ ಕಾಲಿನಲ್ಲಿ ಚಕ್ರ, ಎದೆಯಲ್ಲಿ ಬೆಂಕಿ, ತಲೆಯಲ್ಲಿ ತಂಪು ತುಂಬಿರಬೇಕು. ಈ ಶಿಬಿರದಲ್ಲಿ ಕಲಿತ ವಿಷಯಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಪ್ರಾಂಶುಪಾಲ ಮಂಜುನಾಥ ಭಟ್ ಅಧ್ಯಕ್ಷತೆ ವಹಿಸಿದ್ದರು. ಆನಂದ ಪಾಲಿಮರ್ ಕೊಂಡಾಡಿ ಇದರ ಮಟ್ಟಾರು ಗಣೇಶ ಕಿಣಿ, ಎಸ್ಡಿಎಂಸಿ ಉಪಾಧ್ಯಕ್ಷ ಬಿ.ಎಲ್. ವಿಶ್ವಾಸ್, ಸದಸ್ಯರಾದ ಸುಬ್ರಹ್ಮಣ್ಯ ರಾವ್, ವಿಜಯ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಶರತ್ ಚಂದ್ರ, ಉಪನ್ಯಾಸಕಿ ವೀಣಾ ಡಿ. ನಾಯಕ್, ಶಿಕ್ಷಕಿ ವಸುಂಧರಾ, ಇಂಗ್ಲಿಷ್ ಮಾಧ್ಯಮದ ಎಸ್ಡಿಎಂಸಿ ಸಮಿತಿ ಅಧ್ಯಕ್ಷ ಪೃಥ್ವಿರಾಜ್ ಭಟ್, ಉಪನ್ಯಾಸಕರಾದ ಜಯಶ್ರೀ, ಗೀತಾ ಕುಮಾರಿ, ಸತೀಶ್ ರೈ, ಮಹೇಶ ಕೊಠಾರಿ, ಎನ್ಎಸ್ಎಸ್ ನಾಯಕ ರಾಹುಲ್ ಇದ್ದರು.

ಶಿಬಿರಾರ್ಥಿಗಳಿಗೆ ಅಡಿಗೆ ತಯಾರಿಸಿದ ಭರತ್ ನಾಯಕ್ ಅವರನ್ನು ಸನ್ಮಾನಿಸಲಾಯಿತು. ಶಿಬಿರದ ನೆನಪಿಗಾಗಿ ಅತಿಥಿಗಳಿಂದ ಹಣ್ಣಿನ ಗಿಡ ನೆಡಿಸಲಾಯಿತು. ಉಪನ್ಯಾಸಕ ದೇವದಾಸ್ ಪ್ರಭು ಸ್ವಾಗತಿಸಿದರು. ಎನ್ಎಸ್ಎಸ್ ಘಟಕದ ನಾಯಕಿ ನೀತಿ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.