ಉಡುಪಿ: ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಕರ್ನಾಟಕ, ಕೇರಳ, ಕೊರಗ ಅಭಿವೃದ್ಧಿ ಸಂಘ ಕಿನ್ನಿಗೋಳಿ ಸಂಯೋಜನೆಯಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ನೇತೃತ್ವದಲ್ಲಿ ಕೊಲ್ಲೂರಿನ 30 ಫಲಾನುಭವಿಗಳ ಪೈಕಿ 9 ಮಂದಿಗೆ ಮೂಲ್ಕಿ ನಗರಸಭೆಯಲ್ಲಿ ಹಕ್ಕುಪತ್ರ ವಿತರಿಸಲಾಯಿತು.

ತಹಶೀಲ್ದಾರ್ ಶ್ರೀಧರ್ ಎಸ್. ಮುಂದಲಮನಿ ಮಾತನಾಡಿ, ಉಳಿದ 21 ಫಲಾನುಭವಿಗಳಿಗೆ ಕಲ್ಲಮುಂಡ್ಕೂರು ಗ್ರಾಮದ ಸರ್ವೆ ನಂಬರ್ 343ರಲ್ಲಿ ಭೂಮಿ ಗುರುತಿಸಿದ್ದು, ಇದೇ 16 ಒಳಗಾಗಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಐಟಿಡಿಪಿ ಅಧಿಕಾರಿ ಬಸವರಾಜ್ ಮಾತನಾಡಿ, ತಾಳಿಪಾಡಿ ಗ್ರಾಮದ ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕೊಲ್ಲೂರು ಪದವು ಸರ್ವೆ ನಂಬರ್ 92ರಲ್ಲಿ ಶೀಘ್ರ 9 ಫಲಾನುಭವಿಗಳಿಗೆ ತಲಾ 14 ಸೆನ್ಸ್ ಪ್ರಕಾರ ಐಟಿಡಿಪಿ ವತಿಯಿಂದ ಪ್ಲಾನಿಂಗ್ ಮಾಡುವುದರ ಮೂಲಕ ಕುಡಿಯುವ ನೀರು, ರಸ್ತೆ, ವಿದ್ಯುತ್ ಸಂಪರ್ಕಕ್ಕೆ ಸೋಲಾರ್ ಅಳವಡಿಕೆ, ಚರಂಡಿ ವ್ಯವಸ್ಥೆ ಮಾಡಿಕೊಡಲಾಗುವುದು. ₹65 ಲಕ್ಷ ವೆಚ್ಚದಲ್ಲಿ ಅನುಮೋದನೆ ನೀಡಿದ್ದು, ಸುಸಜ್ಜಿತ ಮನೆ ನಿರ್ಮಾಣ ಮಾಡುವುದಾಗಿ ತಿಳಿಸಿದರು.

ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ಸಂಯೋಜಕ ಕೆ. ಪುತ್ರನ್, ಅಧ್ಯಕ್ಷೆ ಸುಶೀಲಾ ನಾಡ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.