ಕುಂದಾಪುರ: ‘ಭಾರತದಲ್ಲಿ ಆರಂಭವಾಗಿರುವ ಅಭಿವೃದ್ಧಿಯ ಹೊಸ ಶಕೆಗೆ ಜಾಗತಿಕ ಮನ್ನಣೆ ದೊರಕುತ್ತಿದೆ. ಅದಕ್ಕೆ ನಮ್ಮ ಕೌಶಲಯುಕ್ತ ಶಿಕ್ಷಣ ವ್ಯವಸ್ಥೆಯೇ ಕಾರಣ’ ಎಂದು ನೇರಂಬಳ್ಳಿ ಪ್ರಭಾಕರ ಆಚಾರ್ಯ ಮೆಮೊರಿಯಲ್ ಟ್ರಸ್ಟ್ನ ಡಾ.ಭಾಸ್ಕರ್ ಆಚಾರ್ಯ ಹೇಳಿದರು.

ಕೋಟೇಶ್ವರ ಪಬ್ಲಿಕ್ ಸ್ಕೂಲ್ನ ಪ್ರೌಢಶಾಲಾ ವಿಭಾಗದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭಲ್ಲಿ ವಿದ್ಯಾರ್ಥಿ ಪುರಸ್ಕಾರ ವಿತರಿಸಿ ಮಾತನಾಡಿದ ಅವರು, ವಿಕಸಿತ ಭಾರತದಲ್ಲಿ ನಮ್ಮ ಶಿಕ್ಷಣ ಹಾಗೂ ಶಿಕ್ಷಣೇತರ ಚಟುವಟಿಕೆಗಳು ಗುಣಮಟ್ಟದಲ್ಲಿ ಮುಂದಿರಬೇಕು ಎಂದರು.

ಉದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಂಸ್ಥೆಯ ಹಳೆವಿದ್ಯಾರ್ಥಿ, ವಕ್ವಾಡಿ ಪ್ರವೀರ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಅವರು ಮಾತನಾಡಿ, ಸರ್ಕಾರಿ ಶೈಕ್ಷಣಿಕ ಸಂಸ್ಥೆಯಲ್ಲಿ ದೊರಕುವ ಸೌಲಭ್ಯಗಳನ್ನು ಬಳಸಿಕೊಂಡು ಸಾಧಕರಾಗಿ ನಾಡು ಮೆಚ್ಚುವ ಹೆಮ್ಮೆಯ ನಾಗರಿಕರಾಗೋಣ ಎಂದರು.

ವೈದ್ಯಕೀಯ ಕೋರ್ಸ್ಗೆ ಆಯ್ಕೆಯಾದ ಹಳೆವಿದ್ಯಾರ್ಥಿ ಆಯುಷ್ ಶೆಟ್ಟಿ ಅವರನ್ನು ಗೌರವಿಸಲಾಯಿತು. ಕಳೆದ ಶೈಕ್ಷಣಿಕ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ನೇರಂಬಳ್ಳಿ ಪ್ರಭಾಕರ್ ಆಚಾರ್ಯ ಮೆಮೊರಿಯಲ್ ಟ್ರಸ್ಟ್ ವತಿಯಿಂದ ₹85 ಸಾವಿರ ಪ್ರೋತ್ಸಾಹಧನವನ್ನು ಸಾಧಕ ವಿದ್ಯಾರ್ಥಿಗಳಿಗೆ ನೀಡಲಾಯಿತು. ಸಾಧಕ ವಿದ್ಯಾರ್ಥಿಗಳಾದ ಅಂಕಿತಾ, ಪ್ರಣಮ್ಯ, ಸ್ಫೂರ್ತಿ, ಯತೀಶ್, ಸಂಜನಾ, ತಸ್ವಿ ಅಭಿಪ್ರಾಯ ವ್ಯಕ್ತಪಡಿಸಿದರು.

ಉಪ ಪ್ರಾಂಶುಪಾಲ ಚಂದ್ರಶೇಖರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಪ್ರಕಾಶ್ ಶೆಟ್ಟಿ, ಎಸ್ಡಿಎಂಸಿ ಸದಸ್ಯ ಕುಮಾರಸ್ವಾಮಿ ಜೋಗಿ ಭಾಗವಹಿಸಿದ್ದರು. ಶಿಕ್ಷಕಿ ಜಯಶ್ರೀ ಭಟ್ ಸ್ವಾಗತಿಸಿದರು. ಅನುರಾಧ ಬಹುಮಾನ ಪುರಸ್ಕೃತರ ಪಟ್ಟಿ ವಾಚಿಸಿದರು. ದಿವ್ಯಪ್ರಭಾ, ಉದಯ ಮಡಿವಾಳ ಎಂ. ಸನ್ಮಾನಪತ್ರ ವಾಚಿಸಿದರು. ಸುಧಾಬಾಯಿ ನಾಯಕ್ ವಂದಿಸಿದರು, ಶಿಕ್ಷಕಿ ಸಂಧ್ಯಾ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.