ಶನಿವಾರ, ಮಾರ್ಚ್ 6, 2021
30 °C

ಸಿ.ಆರ್‌.ಝಡ್‌ ವ್ಯಾಪ್ತಿಯ 5 ಮರಳು ದಿಬ್ಬಗಳಿಗೆ ಪರವಾನಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಉಡುಪಿ: ಬ್ರಹ್ಮಾವರ ಹಾಗೂ ಉಡುಪಿ ತಾಲ್ಲೂಕಿನ ಸಿ.ಆರ್‌.ಝೆಡ್‌ ವ್ಯಾಪ್ತಿಯ ನದಿ ಪ್ರದೇಶದಲ್ಲಿ 5 ಮರಳು ದಿಬ್ಬಗಳ ತೆರವಿಗೆ ಪರವಾನಿಗೆ ನೀಡಲಾಗಿದೆ ಎಂದು ಭೂ ಹಾಗೂ ಗಣಿ ವಿಜ್ಞಾನ ಇಲಾಖೆ ತಿಳಿಸಿದೆ.

ಉಡುಪಿ ಹಾಗೂ ಬ್ರಹ್ಮಾವರ ತಾಲ್ಲೂಕಿನ ಸಿ.ಆರ್‌.ಝೆಡ್‌ ವ್ಯಾಪ್ತಿಯ ನದಿ ಪ್ರದೇಶದಲ್ಲಿ 9 ದಿಬ್ಬಗಳನ್ನು ಗುರುತಿಸಲಾಗಿತ್ತು. ಅವುಗಳಲ್ಲಿ 7 ಮರಳು ದಿಬ್ಬಗಳಿಗೆ ಕೆ.ಎಸ್‌.ಸಿ.ಝೆಡ್‌.ಎಂ.ಎ ಯಿಂದ ಅನುಮೋದನೆ ದೊರತಿತ್ತು. ಆದರೆ ಸೀತಾ ನದಿಯ 2 ಮರಳು ದಿಬ್ಬಗಳಿಗೆ ಆಕ್ಷೇಪಣೆ ಬಂದಿರುವುದರಿಂದ ಉಳಿದ 5 ಮರಳು ದಿಬ್ಬಗಳಿಗೆ ಪರವಾನಗಿ ನೀಡುವ ಕುರಿತು 7 ಸದಸ್ಯರ ನೇತೃತ್ವದ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

2011ರ ಪೂರ್ವದಲ್ಲಿ ಪರವಾನಗಿ ಪಡೆದಿರುವ 61 ಸಾಂಪ್ರದಾಯಿಕ ಮರಳು ಪರವಾನಿಗೆದಾರರಲ್ಲಿ 45 ಅರ್ಜಿದಾರರು ಮರಳು ದಿಬ್ಬದ ಸಂಖ್ಯೆಯನ್ನು ನಮೂದಿಸಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಅವರ ಸಂಪೂರ್ಣ ಮಾಹಿತಿಯನ್ನು ಐ.ಎಲ್‌.ಎಂ.ಎಸ್‌ ತಂತ್ರಾಂಶದಲ್ಲಿ ಆಳವಡಿಸಲಾಗಿದೆ. ಜಿ.ಪಿ.ಎಸ್‌ ತರಬೇತಿ ನೀಡಲಾಗಿದೆ. ಈಗಾಗಲೇ 5 ಜನರು ಮರಳುಗಾರಿಕೆ ಹಾಗೂ ಸಾಗಾಟ ಪರವಾನಿಗೆಯನ್ನು ಪಡೆದುಕೊಂಡಿದ್ದಾರೆ. ಉಳಿದ 40 ಅರ್ಜಿದಾರರು ಸಹ ಪರವಾನಿಗೆಯನ್ನು ಪಡೆಯಬಹುದು ಎಂದು ತಿಳಿಸಿದ್ದಾರೆ‌.

ಸಾರ್ವಜನಿಕರು 45 ಪರವಾನಗಿದಾರರಿಂದ ಮರಳು ಪಡೆಯಬಹುದಾಗಿದೆ. ನಿಗಧಿಪಡಿಸಿದ ಮರಳಿನ ಪ್ರಮಾಣದಲ್ಲಿ ಶೇ 10ರಷ್ಟು ಮರಳನ್ನು ನೇಜಾರಿನಲ್ಲಿರುವ ನಿರ್ಮಿತಿ ಕೇಂದ್ರದ ಸ್ಟಾಕ್‌ ಯಾರ್ಡ್‌ಗೆ ಸಾಗಾಟ ಮಾಡುವಂತೆ ಪರವಾನಿಗೆದಾರರಿಗೆ ಸೂಚನೆ ನೀಡಲಾಗಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು