ಕಾರ್ಕಳ ಬಸ್ ನಿಲ್ದಾಣದ ಸಮೀಪ ದಿನಗೂಲಿಗಾಗಿ ಕಾಯುತ್ತಿದ್ದ ವಲಸೆ ಕಾರ್ಮಿಕರು
ಮಳೆ ಇರಲಿ ಬಿಸಿಲಿರಲಿ ಟಿನ್ ಹಾಸಿದ ಜೋಪಡಿಯಲ್ಲೇ ಬದುಕಬೇಕಾದ ಅನಿವಾರ್ಯತೆ ನಮಗಿದೆ. ದುಬಾರಿ ಬಾಡಿಗೆ ಕೊಟ್ಟು ಬಾಡಿಗೆ ಮನೆಗಳಲ್ಲಿ ವಾಸಿಸಲು ನಮಗೆ ಸಾಧ್ಯವಿಲ್ಲ. ನಮ್ಮ ಮಕ್ಕಳನ್ನು ಇಲ್ಲೇ ಶಾಲೆಗೆ ಸೇರಿಸಿದ್ದೇವೆ
–ಚೆನ್ನಪ್ಪ ರಾಠೋಡ್ ಬಾಗಲಕೋಟೆ
ಮಳೆಗಾಲ ಮತ್ತು ಅಯ್ಯಪ್ಪ ಮಾಲಾಧಾರಣೆಯ ಋತುವಲ್ಲಿ ನಮಗೆ ಕೆಲಸ ಕಡಿಮೆ ಇರುತ್ತದೆ. ಈ ಸಂದರ್ಭದಲ್ಲಿ ಮನೆ ಬಾಡಿಗೆ ಕಟ್ಟಲೂ ಪರದಾಡಬೇಕಾಗುತ್ತದೆ. ಉಳಿದಂತೆ ಪ್ರತಿದಿನ ಕೆಲಸ ಸಿಗುತ್ತದೆ. ಗುತ್ತಿಗೆದಾರರು ವಾಹನಗಳಲ್ಲಿ ನಮ್ಮನ್ನು ಕೆಲಸಕ್ಕೆ ಕರೆದುಕೊಂಡು ಹೋಗುತ್ತಾರೆ. ನಮ್ಮ ಊರಿನಲ್ಲಿ ಕೆಲಸ ಸಿಗದ ಕಾರಣ ಇಲ್ಲಿಗೆ ಕುಟುಂಬ ಸಮೇತ ಬರುತ್ತೇವೆ. ವರ್ಷದಲ್ಲಿ ಎರಡು ಅಥವಾ ಮೂರು ಬಾರಿ ಊರಿಗೆ ಹೋಗುತ್ತೇವೆ
–ನಾರಾಯಣ ವಲಸೆ ಕಾರ್ಮಿಕ ಬಾಗಲಕೋಟೆ
ಕಟ್ಟಡ ನಿರ್ಮಾಣ ಕಾಮಗಾರಿ ರಸ್ತೆ ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ನಮ್ಮನ್ನೇ ಹೆಚ್ಚಾಗಿ ಕರೆಯುತ್ತಾರೆ. ನಮಗೆ ಊರಲ್ಲಿ ಕೃಷಿ ಇಲ್ಲ ಅನಿವಾರ್ಯವಾಗಿ ಬೇರೆಡೆ ದುಡಿಯಲು ಹೋಗಬೇಕು. ಎಂಟು ವರ್ಷಗಳಿಂದ ಇಲ್ಲಿ ನೆಲೆಸಿದ್ದೇವೆ.