ಹೆಬ್ರಿ: ಲಯನ್ಸ್ ಕ್ಲಬ್ ಅಂತರರಾಷ್ಟ್ರೀಯ ಮಟ್ಟದ ದೊಡ್ಡ ಸೇವಾ ಸಂಸ್ಥೆ. ಸೇವೆಗೆ ಮೀಸಲಾದ ಲಯನ್ಸ್ಗೆ ವಿಶ್ವದಲ್ಲೇ ವಿಶೇಷ ಮನ್ನಣೆ ಇದೆ. ಸೇವೆಯ ಜೊತೆಗೆ ಲಯನ್ಸ್ ಮೂಲಕ ನಾಯಕತ್ವ ಬೆಳೆಸಿಕೊಳ್ಳಬಹುದು ಎಂದು ಲಯನ್ಸ್ ಪ್ರಾಂತೀಯ ಪೂರ್ವಾಧ್ಯಕ್ಷ ಜೀತೇಂದ್ರ ಪುಟಾರ್ಡೊ ಹೇಳಿದರು.

ಅವರು ಮುನಿಯಾಲು ಲಯನ್ಸ್ ಕ್ಲಬ್ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ನೆರವೇರಿಸಿ ಮಾತನಾಡಿದರು.

ಪೂರ್ವಾಧ್ಯಕ್ಷ ಕಾಡುಹೊಳೆ ಮಂಜುನಾಥ್, ಸೇವಾವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ನೂತನ ಅಧ್ಯಕ್ಷ ಟಿ. ಭುಜಂಗ ಶೆಟ್ಟಿ ಪದಗ್ರಹಣ ಸ್ವೀಕರಿಸಿ ಮಾತನಾಡಿ, ಅವಕಾಶ ಕಲ್ಪಿಸಿದ ಪ್ರಮುಖರಿಗೆ ಅಭಿನಂದನೆ ಸಲ್ಲಿಸಿದರು.

ಕ್ಲಬ್ ಪೂರ್ವಾಧ್ಯಕ್ಷರಾದ ಕಾಡುಹೊಳೆ ಮಂಜುನಾಥ್ ದಂಪತಿ, ಲಯನ್ಸ್ ಪ್ರಾಂತೀಯ ಪೂರ್ವಾಧ್ಯಕ್ಷ ಜೀತೇಂದ್ರ ಪುಟಾರ್ಡೊ ದಂಪತಿ, ವೈದ್ಯರ ದಿನದ ಪ್ರಯುಕ್ತ ವರಂಗದ ಡಾ.ವಸಂತ್ ಅವರನ್ನು ಸನ್ಮಾನಿಸಲಾಯಿತು. ಹಲವರಿಗೆ ಸೇವಾ ಕಾರ್ಯ, ಶೈಕ್ಷಣಿಕ, ಆರೋಗ್ಯ ನೆರವು ನೀಡಲಾಯಿತು.

ಲಯನ್ಸ್ ಪ್ರಾಂತೀಯ ಅಧ್ಯಕ್ಷ ಬೇಳಂಜೆ ಹರೀಶ ಪೂಜಾರಿ, ಪ್ರಾಂತೀಯ ಕಾರ್ಯದರ್ಶಿ ಥೋಮಸ್ ಲೂಕಾಸ್ ಅಜೆಕಾರು ಮಾತನಾಡಿದರು. ಲಿಯೊ ಕ್ಲಬ್ ಶರಣ್ಯಾ ಭಟ್, ನೂತನ ಪದಾಧಿಕಾರಿಗಳಾದ ಉಪಾಧ್ಯಕ್ಷ ಸಂದೇಶ ಶೆಟ್ಟಿ, ಕೋಶಾಧಿಕಾರಿ ಅಶೋಕ ಎಂ.ಶೆಟ್ಟಿ, ಸಾರ್ವಜನಿಕ ಸಂಪರ್ಕಾಧಿಕಾರಿ ಉಮೇಶ ಶೆಟ್ಟಿ, ನಿರ್ದೇಶಕರಾದ ಸೀತಾರಾಮ ಕಡಂಬ, ಡಾ.ಕೆ. ಸುದರ್ಶನ್ ಹೆಬ್ಬಾರ್, ಡಾ.ಪ್ರಮೋದ್ ಕುಮಾರ್ ಹೆಗ್ಡೆ, ಚಿರಂಜಿತ್ ಅಜಿಲ, ಸುಜಯ ಶೆಟ್ಟಿ, ಹರ್ಷ ಶೆಟ್ಟಿ, ವಿವಿಧ ಪ್ರಮುಖರಾದ ಸಂಪತ್ ಕುಮಾರ್, ಅಶೋಕ್ ಕುಮಾರ್ ದೊಂಡೆರಂಗಡಿ, ಪದಾಧಿಕಾರಿಗಳು ಇದ್ದರು. ಶಂಕರ ಶೆಟ್ಟಿ ಮುನಿಯಾಲು ನಿರೂಪಿಸಿದರು. ಮುನಿಯಾಲು ಗೋಪಿನಾಥ ಭಟ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.