ಪಡುಬಿದ್ರಿ: ಕಾಪು ವಿಧಾನಸಭಾ ಕ್ಷೇತ್ರದ ಎಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಕಾಮಗಾರಿಗಳಿಗೆ ಮಂಜೂರು ಆಗಿರುವ ₹1.15 ಕೋಟಿ ಮೊತ್ತದ ಕಾಮಗಾರಿಗಳ ಭೂಮಿಪೂಜೆ ಹಾಗೂ ಉದ್ಘಾಟನೆ ನಡೆಯಿತು.

ಎಲ್ಲೂರು ಅದಮಾರು ಬಳಿ ಮಲ್ಟಿ ಪರ್ಪಸ್ ಸೆಂಟರ್ ನಿರ್ಮಾಣಕ್ಕೆ ₹60 ಲಕ್ಷ, ಮಡಿವಾಳ ತೋಟ ಹರೀಶ್ ಶೆಟ್ಟಿ ಬಳಿ ರಸ್ತೆ ಅಭಿವೃದ್ಧಿಗೆ ₹10 ಲಕ್ಷ, ಮಾಣಿಯೂರು ಕೋರ್ದಬ್ಬು ದೈವಸ್ಥಾನ ರಸ್ತೆ ಅಭಿವೃದ್ಧಿಗೆ ₹10 ಲಕ್ಷ, ಎಲ್ಲೂರು ಗುತ್ತು ರಸ್ತೆ ಅಭಿವೃದ್ಧಿಗೆ ₹10 ಲಕ್ಷ ಸೇರಿದಂತೆ ಒಟ್ಟು ₹90 ಲಕ್ಷ ಮೊತ್ತದ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲಾಯಿತು.

ಉಳ್ಳೂರು ವಿಮಲಾ ಪೂಜಾರ್ತಿ ಮನೆ ಬಳಿ ರಸ್ತೆ ಅಭಿವೃದ್ಧಿ, ತೆಂಕರಗುತ್ತು ರಸ್ತೆ ಅಭಿವೃದ್ಧಿ, ಮಾಣಿಯೂರು ಮಠ ರಸ್ತೆ ಅಭಿವೃದ್ಧಿ, ಕುಂಜೂರು ಶಾಂಭವಿ ಶೆಟ್ಟಿ ಮನೆ ಬಳಿ ರಸ್ತೆ ಅಭಿವೃದ್ಧಿ, ಪಾಂಡುರಂಗ ಭಜನಾ ಮಂದಿರದ ಶೌಚಾಲಯ ಮತ್ತು ಸ್ನಾನದ ಕೋಣೆ ನಿರ್ಮಾಣ ಸೇರಿ ಒಟ್ಟಯ ₹25 ಲಕ್ಷ ವೆಚ್ಚದ ಕಾಮಗಾರಿಗಳನ್ನು ಉದ್ಘಾಟಿಸಲಾಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿರಾಜ್ ರಾವ್, ಉಪಾಧ್ಯಕ್ಷೆ ಉಷಾ, ಸದಸ್ಯರಾದ ಜಯರಾಮ ದೇವಾಡಿಗ, ಶಾಂತಿ ಆಚಾರ್ಯ, ವಸಂತಿ ಮಧ್ವರಾಜ್, ಹರೀಶ್ ಬೆಳ್ಳಿಬೆಟ್ಟು, ದಯಾನಂದ ಶೆಟ್ಟಿಗಾರ್, ಎಲ್ಲೂರು ಬಿಜೆಪಿ ಶಕ್ತಿ ಕೇಂದ್ರದ ಸಂಚಾಲಕ ಸತೀಶ್ ಶೆಟ್ಟಿ ಗುಡ್ಡೆಚ್ಚಿ, ಪ್ರಮುಖರಾದ ಹರೀಶ್ ಶೆಟ್ಟಿ, ಗಣೇಶ್ ಕುಲಾಲ್ ಎಲ್ಲೂರು, ಉದಯ ಅದಮಾರು, ಸದಾನಂದ ಪೂಜಾರಿ, ಸುಕೇಶ್ ಶೆಟ್ಟಿ ಉಳ್ಳೂರು, ರಾಜೇಂದ್ರ ಸಾಲಿಯಾನ್, ರಾಘವೇಂದ್ರ ರಾವ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.