ಮಂಗಳವಾರ, ಮೇ 17, 2022
26 °C

ಬ್ರಹ್ಮಾವರದಲ್ಲಿ ಮಳೆ: ಶಾಲೆಯ ಕಾಂಪೌಂಡ್ ಕುಸಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬ್ರಹ್ಮಾವರ: ಬ್ರಹ್ಮಾವರ ಪರಿಸರದ ಕೆಲವೆಡೆ ಶುಕ್ರವಾರ ಸಂಜೆ ಉತ್ತಮ ಮಳೆ‌ ಸುರಿಯಿತು. ನಗರದಲ್ಲಿ ಶುಕ್ರವಾರ ಸಂಜೆ ಸುರಿದ ಮಳೆಗೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣ ಗೋಡೆ ಕುಸಿದು ನಷ್ಟ ಉಂಟಾಗಿದೆ.

ಮೈದಾನದಲ್ಲಿ ನೀರು ಶೇಖರಣೆಯಾಗಿ ಈ ಆವರಣ ಕುಸಿದಿದೆ. ಕಳಪೆ ಕಾಮಗಾರಿಯಿಂದ ಸತತ ಮೂರನೇ ಬಾರಿ ಈ ಗೋಡೆ ಕುಸಿದಿದೆ ಎಂದು ಸ್ಥಳೀಯರು ದೂರಿದ್ದಾರೆ.

‌ಅಪಾಯ: ಶಾಲೆಯ ಮೈದಾನದಲ್ಲಿಯೇ ತೆರೆದ ಬಾವಿ ಇದ್ದು, ಮಳೆಗಾಲದಲ್ಲಿ ಕುಸಿಯುವ ಭೀತಿ ಇದೆ, ಶಾಲಾ ವಿದ್ಯಾರ್ಥಿಗಳು ಇಲ್ಲೇ ಆಟವಾಡುವುದರಿಂದ ಮಳೆಗಾಲದೊಳಗೆ ಬಾವಿಯ ಸುತ್ತ ಕಾಂಪೌಂಡ್ ನಿರ್ಮಿಸಬೇಕೆಂದು ಸಾರ್ವಜನಿಕರು‌ ಒತ್ತಾಯಿಸಿದ್ದಾರೆ.

ರಭಸದ ಗಾಳಿಗೆ ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಿತ್ತು. ಚಾಂತಾರು, ಆರೂರು, ಹೇರೂರು ಪರಿಸರದಲ್ಲಿಯೂ ಉತ್ತಮವಾಗಿ ಮಳೆಯಾಯಿತು.

ಮಳೆ ಬಿರುಸು

ಉಡುಪಿ: ಉಡುಪಿಯಲ್ಲಿ ಶುಕ್ರವಾರ ಗುಡುಗು ಸಿಡಿಲು ಸಹಿತ ಬಿರುಸಿನ ಮಳೆ ಸುರಿಯಿತು. ಸಂಜೆ ಸುರಿದ ಭಾರಿ ಮಳೆಗೆ ಹಲವೆಡೆ ಸಂಚಾರ ಅಸ್ತವ್ಯಸ್ತವಾಗಿತ್ತು. ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು