ಕಾಪು (ಪಡುಬಿದ್ರಿ): ಕೇರಳದಿಂದ ಮುಂಬೈಗೆ ಪ್ರಯಾಣಿಸುತಿದ್ದ ಪ್ರಯಾಣಿಕರೊಬ್ಬರ ಬ್ಯಾಗ್ ಅನ್ನು ಕಳ್ಳರು ಎತ್ತಿಕೊಂಡು ಪರಾರಿಯಾಗಿರುವ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೇರಳದ ವಯನಾಡ್ ನಿವಾಸಿ ಶಾಲಿ ಎನ್.ಎ ಅವರು ಕೋಝಿಕೋಡ್ನಿಂದ ಮುಂಬೈಗೆ ರೈಲಿನಲ್ಲಿ ಮಧ್ಯರಾತ್ರಿ ತೆರಳಿದ್ದರು. ಹ್ಯಾಂಡ್ ಬ್ಯಾಗ್ ಅನ್ನು ತಲೆಯ ಬದಿಯಲ್ಲಿ ಇಟ್ಟು ಮಲಗಿದ್ದು, ಬೆಳಗಿನ ಜಾವ 5 ಗಂಟೆಯ ವೇಳೆ ಇನ್ನಂಜೆ ರೈಲು ನಿಲ್ದಾಣದ ಔಟರ್ ಟ್ರ್ಯಾಕ್ನಲ್ಲಿ ನಿಂತಿದ್ದ ಅಪರಿಚಿತ ವ್ಯಕ್ತಿಯು ಹ್ಯಾಂಡ್ ಬ್ಯಾಗ್ನ್ನು ಎಳೆದಾಗ ಅವರಿಗೆ ಎಚ್ಚರವಾಗಿದೆ. ಬ್ಯಾಗ್ ಎಳೆದ ವ್ಯಕ್ತಿಯನ್ನು ಹಿಡಿಯಲು ಹೋಗಿದ್ದು, ವ್ಯಕ್ತಿ ರೈಲುಗಾಡಿಯಿಂದ ಕೆಳಗೆ ಇಳಿದು ಹ್ಯಾಂಡ್ ಬ್ಯಾಗ್ ಸಮೇತ ಪರಾರಿಯಾಗಿದ್ದಾನೆ. ಆ ಸಮಯದಲ್ಲಿ ಸಾಕಷ್ಟು ಬೆಳಕು ಇಲ್ಲದ ಕಾರಣ ವ್ಯಕ್ತಿ ಗುರುತು ಪತ್ತೆಯಾಗಿಲ್ಲ ಎಂದು ಅವರು ತಿಳಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ಹ್ಯಾಂಡ್ ಬ್ಯಾಗ್, ನಗದು ₹2,000, ಮೊಬೈಲ್ ಫೋನ್ ಸೇರಿ ಒಟ್ಟು ₹26 ಸಾವಿರ ಮೌಲ್ಯದ ಸೊತ್ತುಗಳು, ದಾಖಲೆಗಳು ಬ್ಯಾಗ್ನಲ್ಲಿದ್ದವು ಎಂದು ದೂರುದಾರರು ತಿಳಿಸಿದ್ದಾರ. ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.