ಗುರುವಾರ , ಜೂಲೈ 9, 2020
24 °C

ಉಡುಪಿ: 18 ಜನರ ವರದಿ ನೆಗೆಟಿವ್: ಡಿಎಚ್‌ಒ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಉಡುಪಿ: ಮಂಡ್ಯ ಜಿಲ್ಲೆಯ ನಾಗಮಂಗಲದ ಕೋವಿಡ್‌ ಸೋಂಕಿತನ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಕ್ಕೆ ಬಂದಿದ್ದ ಉಡುಪಿಯ 18 ಮಂದಿಯ ಪರೀಕ್ಷಾ ವರದಿ ಶುಕ್ರವಾರ ಬಂದಿದ್ದು, ಯಾರಲ್ಲೂ ಸೋಂಕು ಪತ್ತೆಯಾಗಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುಧೀರ್ ಚಂದ್ರ ಸೂಡ ತಿಳಿಸಿದರು.

ಆದರೂ, ಮುನ್ನೆಚ್ಚರಿಕಾ ಕ್ರಮವಾಗಿ 18 ಮಂದಿಗೆ 14 ದಿನಗಳ ಕ್ವಾರಂಟೈನ್ ಅವಧಿ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ. ಅವರ ಆರೋಗ್ಯದ ಮೇಲೆ ನಿಗಾ ವಹಿಸಲಾಗಿದೆ ಎಂದು ತಿಳಿಸಿದರು.

ಹಿನ್ನೆಲೆ: ಮುಂಬೈನಿಂದ ಉಡುಪಿ ಮಾರ್ಗವಾಗಿ ಟ್ರಕ್‌ ಚಲಾಯಿಸಿಕೊಂಡು ಮಂಡ್ಯಕ್ಕೆ ಹೊರಟಿದ್ದ ಸೋಂಕಿತ ಏ.21 ಹಾಗೂ 22 ರಂದು ತೆಕ್ಕಟ್ಟೆಯ ಪೆಟ್ರೋಲ್ ಬಂಕ್‌ ಬಳಿ ಗಾಡಿ ನಿಲ್ಲಿಸಿ ಊಟ ಮಾಡಿದ್ದ. ರಾತ್ರಿ ಗಾಡಿಯಲ್ಲಿ ತಂಗಿ ಬೆಳಿಗ್ಗೆ ಬಂಕ್‌ನ ನಲ್ಲಿಯಲ್ಲಿ ಸ್ನಾನ ಮಾಡಿದ್ದ. ನಂತರ ಸಾಸ್ತಾನ ಟೋಲ್‌ನಲ್ಲಿ ಸಿಬ್ಬಂದಿ ಜತೆ ಮಾತನಾಡಿದ್ದ. ಈ ಸಂಬಂಧ 18 ಜನರನ್ನು ಪತ್ತೆಹಚ್ಚಿ ಜಿಲ್ಲಾಡಳಿತ ಕ್ವಾರಂಟೈನ್ ಮಾಡಿತ್ತು. ಗಂಟಲ ದ್ರವವನ್ನು ಪ್ರಯೋಗಾಲಯಕ್ಕೆ ಕಳುಹಿಸಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು