ಸೋಮವಾರ, ಜೂಲೈ 6, 2020
23 °C

ಉಡುಪಿ: ಶಯನೀ ಏಕಾದಶಿ ಪ್ರಯುಕ್ತ ಕೃಷ್ಣಮಠದಲ್ಲಿ ಸುದರ್ಶನ ಹೋಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಶಯನೀ ಏಕಾದಶಿ ಪ್ರಯುಕ್ತ ಕೃಷ್ಣಮಠದಲ್ಲಿ ಬುಧವಾರ ಸುದರ್ಶನ ಹೋಮ ನಡೆಯಿತು. ಬಳಿಕ ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಸ್ವಾಮೀಜಿಯು ಅಷ್ಟಮಠದ ಕೆಲವು ಯತಿಗಳಿಗೆ ತಪ್ತ ಮುದ್ರಾಧಾರಣೆ ಮಾಡಿದರು.

ಪ್ರತಿ ವರ್ಷ ತಪ್ತ ಮುದ್ರಾಧಾರಣೆಯಲ್ಲಿ ರಾಜ್ಯದ ಹಲವೆಡೆಗಳಿಂದ ಭಕ್ತರು ಭಾಗವಹಿಸುತ್ತಿದ್ದರು. ಈ ವರ್ಷ ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಭಕ್ತರಿಗೆ ತಪ್ತಮುದ್ರಾಧಾರಣೆ ಇರಲಿಲ್ಲ. ಮಠದೊಳಗೆ ಯತಿಗಳಿಗೆ ಮಾತ್ರ ಮುದ್ರಾಧಾರಣೆ ನಡೆಯಿತು.

ಪರ್ಯಾಯ ಅದಮಾರು  ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ, ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ, ಪಲಿಮಾರು ಮಠದ ಕಿರಿಯ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.