ಉಡುಪಿ: ಅವಧಿಗೆ ಮುನ್ನವೇ ಮುಂಗಾರು ಮಳೆಯ ಆಗಮನವಾಗಿ ಭೂಮಿ ಹದಗೊಂಡಿದ್ದು, ಜಿಲ್ಲೆಯಾದ್ಯಂತ ಕೃಷಿ ಚಟುವಟಿಕೆಗಳಿಗೆ ಸಿದ್ಧತೆ ಆರಂಭವಾಗಿದೆ.

ಭತ್ತದ ಕೃಷಿಯೇ ಪ್ರಧಾನವಾಗಿರುವ ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಹಲವು ಸವಾಲುಗಳ ನಡುವೆಯೇ ಈ ಕೃಷಿ ಮಾಡಬೇಕಾದ ಅನಿವಾರ್ಯತೆ ಕೃಷಿಕರಿಗಿದೆ.

ಕೃಷಿ ಕಾರ್ಮಿಕರ ಕೊರತೆ, ಟ್ರ್ಯಾಕ್ಟರ್ ಮೊದಲಾದ ಯಂತ್ರೋಪಕರಣಗಳ ದುಬಾರಿ ಬಾಡಿಗೆಯ ನಡುವೆ ಕೃಷಿ ಮಾಡಿದರೂ ಪ್ರಕೃತಿಯ ಮುನಿಸಿನಿಂದ ನೆರೆಗೆ ಬೆಳೆ ಕೊಚ್ಚಿಹೋಗುವ ಅಪಾಯವೂ ಇರುತ್ತದೆ.

ಕಳೆದ ಮಳೆಗಾಲದಲ್ಲಿ ಪದೇ ಪದೇ ನೆರೆ ಬಂದ ಕಾರಣ ಹಲವು ಹೆಕ್ಟೇರ್ ಪ್ರದೇಶಗಳಲ್ಲಿ ಬೆಳೆದಿದ್ದ ಭತ್ತದ ಬೆಳೆ ಕೊಳೆತು ಹೋಗಿತ್ತು. ಹೆಚ್ಚಿನ ರೈತರು ಮರು ನಾಟಿ ಮಾಡಬೇಕಾದ ಪರಿಸ್ಥಿತಿ ಎದುರಾಗಿತ್ತು. ಮರು ನಾಟಿ ಮಾಡಿದರೂ ಉತ್ತಮ ಫಸಲು ಲಭಿಸದೆ ಹಲವು ಮಂದಿ ರೈತರು ಕೈ ಸುಟ್ಟುಕೊಂಡಿದ್ದರು.

ಈ ಬಾರಿ 35 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬಿತ್ತನೆ ಗುರಿ ಹೊಂದಲಾಗಿದೆ ಎಂದು ಕೃಷಿ ಇಲಾಖೆಯ ಮೂಲಗಳು ತಿಳಿಸಿವೆ.

ಜಿಲ್ಲೆಯಲ್ಲಿ ಎಂಒ4 ಬಿತ್ತನೆ ಬೀಜಕ್ಕೆ ರೈತರಿಂದ ಹೆಚ್ಚಿನ ಬೇಡಿಕೆ ಇದೆ. ಕಳೆದ ಸಾಲಿನಲ್ಲಿ ಎಂಒ4 ಬಿತ್ತನೆ ಬೀಜದ ಕೊರತೆಯಿಂದಾಗಿ ಆರಂಭದಲ್ಲೇ ರೈತರು ಸಮಸ್ಯೆ ಎದುರಿಸಿದ್ದರು.

ಜಿಲ್ಲೆಯಾದ್ಯಂತ ರೈತರು ತಾವೇ ಭತ್ತದ ಬೀಜ ಉತ್ಪಾದನೆ ಮಾಡದೆ ಕೃಷಿ ಇಲಾಖೆಯನ್ನೇ ನಂಬಿ ಕೂತಿದ್ದರಿಂದ ಕಳೆದ ವರ್ಷ ಎಂಒ4 ಬಿತ್ತನೆ ಬೀಜ ಸಿಗದೆ ಪರದಾಡಬೇಕಾಯಿತು ಎಂಬುದು ಕೆಲವರ ಅಭಿಪ್ರಾಯವಾಗಿದೆ.

135 ದಿನಗಳಲ್ಲಿ ಉತ್ತಮ ಇಳುವರಿ ನೀಡುವ ಎಂಒ4 ತಳಿಯು ಕರಾವಳಿಗೆ ಹೆಚ್ಚು ಸೂಕ್ತವಾದ ಭತ್ತದ ತಳಿಯಾಗಿದ್ದು, ನೆರೆ ಬಂದರೂ ಸಹಿಸಿಕೊಳ್ಳುವ ಶಕ್ತಿ ಈ ತಳಿಗಿದೆ ಎಂಬುದು ಇಲ್ಲಿನ ರೈತರ ವಿಶ್ವಾಸವಾಗಿದೆ. ಎಂಒ4 ತಳಿಗೆ ಪರ್ಯಾಯವಾಗಿ ಸಹ್ಯಾದ್ರಿ ಕೆಂಪುಮುಕ್ತಿ ತಳಿಯನ್ನು ಪರಿಚಯಿಸಿದರೂ ರೈತರು ಅದರತ್ತ ಒಲವು ತೋರಿಲ್ಲ. ಕೆಲವೇ ರೈತರಷ್ಟೇ ಆ ತಳಿಯ ಭತ್ತದ ಕೃಷಿ ಮಾಡಿದ್ದರು.

‘ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಅಂದಾಜು 2,500 ಕ್ವಿಂಟಲ್ನಷ್ಟು ಬಿತ್ತನೆ ಬೀಜದ ಅವಶ್ಯಕತೆಯಿದ್ದು, ಈಗಾಗಲೇ 2,800 ಕ್ವಿಂಟಲ್ ಎಂ.ಒ-4 ಬಿತ್ತನೆ ಬೀಜ ಸರಬರಾಜಿಗೆ ಕರ್ನಾಟಕ ರಾಜ್ಯ ಬೀಜ ನಿಗಮಕ್ಕೆ ಬೇಡಿಕೆ ಸಲ್ಲಿಸಲಾಗಿದ್ದು, 1,696 ಕ್ವಿಂಟಲ್ ಎಂ.ಒ-4 ಬಿತ್ತನೆ ಬೀಜವನ್ನು ರೈತ ಸಂರ್ಪಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿದೆ’ ಎಂದು ಕೃಷಿ ಇಲಾಖೆಯ ಮೂಲಗಳು ತಿಳಿಸಿವೆ.

‘ಬಿತ್ತನೆ ಬೀಜವನ್ನು ಸಾಮಾನ್ಯ ವರ್ಗದ ರೈತರಿಗೆ ಪ್ರತಿ ಕೆ.ಜಿಗೆ ₹8 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಪ್ರತಿ ಕೆ.ಜಿಗೆ ₹12 ರ ಸಹಾಯಧನದಲ್ಲಿ ಒದಗಿಸಲಾಗುತ್ತಿದೆ. ಪ್ರಸ್ತುತ 1,058 ಮಂದಿ ರೈತರಿಗೆ 475 ಕ್ವಿಂಟಲ್ ಬಿತ್ತನೆ ಬೀಜವನ್ನು ವಿತರಿಸಲಾಗಿದೆ. ಪ್ರಸಕ್ತ ಸಾಲಿಗೆ ಕರ್ನಾಟಕ ರಾಜ್ಯ ಬೀಜ ನಿಗಮದಲ್ಲಿ 5,750 ಕ್ವಿಂಟಲ್ನಷ್ಟು ಎಂ.ಒ-4 ಬಿತ್ತನೆ ಬೀಜ ದಾಸ್ತಾನಿದ್ದು, ಯಾವುದೇ ರೀತಿಯ ಕೊರತೆ ಇಲ್ಲ’ ಎಂದೂ ಹೇಳಿವೆ.

‘ಎಂಒ4 ಬೀಜ ಕೊರತೆ ಇಲ್ಲ’

ಈ ವರ್ಷ ರೈತ ಸಂಪರ್ಕ ಕೇಂದ್ರಗಳಲ್ಲಿ ಸಾಕಷ್ಟು ದಾಸ್ತಾನು ಮಾಡಿರುವುದರಿಂದ ಎಂಒ4 ಬಿತ್ತನೆ ಬೀಜದ ಕೊರತೆ ಎದುರಾಗದು. ಈಗಾಗಲೇ ಬಿತ್ತನೆ ಬೀಜದ ಮಾರಾಟ ಆರಂಭವಾಗಿದೆ. ಸಹ್ಯಾದ್ರಿ ಕೆಂಪು ಮುಕ್ತಿ ತಳಿಯ ಬಿತ್ತನೆ ಬೀಜವನ್ನು ಕಳೆದ ವರ್ಷ ಕೆಲವು ರೈತರಿಗೆ ವಿತರಣೆ ಮಾಡಲಾಗಿತ್ತು. ಆ ತಳಿಯನ್ನು ಬೆಳೆಯಲು ಆಸಕ್ತಿ ಇರುವವರು ಅದನ್ನೂ ಬೆಳೆಯಬಹುದು. ಕೃಷಿ ಯಂತ್ರ ಧಾರೆ ಯೋಜನೆ ಅಡಿಯಲ್ಲಿ ಜಿಲ್ಲೆಯಲ್ಲಿ 9 ಕೇಂದ್ರಗಳಿದ್ದು ಅದರಲ್ಲಿ 5 ಕೇಂದ್ರಗಳಷ್ಟೆ ಕಾರ್ಯ ನಿರ್ವಹಿಸುತ್ತಿವೆ. ಉಳಿದ 4 ಕೇಂದ್ರಗಳ ನಿರ್ವಹಣೆದಾರರೊಂದಿಗಿನ ಒಪ್ಪಂದ ಮುಗಿದಿದ್ದು ಹೊಸ ಒಪ್ಪಂದಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಪೂರ್ಣಿಮಾ ಜಿ.ಸಿ. ತಿಳಿಸಿದ್ದಾರೆ.

‘ರೈತರ ಸಭೆ ಕರೆಯಲಿ’

ಮುಂಗಾರು ಆರಂಭವಾಗಿ ಕೃಷಿ ಚಟುವಟಿಕೆ ಶುರುವಾಗುವುದಕ್ಕಿಂತಲೂ ಮೊದಲು ಸಂಬಂಧಪಟ್ಟವರು ರೈತ ಸಂಘಟನೆಗಳ ಸಭೆ ಕರೆಯಬೇಕು. ಸಭೆಯಲ್ಲಿ ನಾವು ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಅಧಿಕಾರಿಗಳ ಮುಂದಿರಿಸುತ್ತೇವೆ. ಈ ಬಾರಿ ಮಳೆ ಬೇಗನೆ ಶುರುವಾಗಿದೆ. ಆದರೆ ಜೂನ್ ಜುಲೈ ತಿಂಗಳಿನಲ್ಲಿ ಮಳೆ ಬಿಡುವು ನೀಡಿದರೆ ಭತ್ತದ ಕೃಷಿಗೆ ಸಮಸ್ಯೆ ಎದುರಾಗಬಹುದು. ಕರಾವಳಿಯ ರೈತರು ಹೆಚ್ಚು ಪ್ರಯೋಗಶೀಲತೆಗೆ ಇಳಿಯುವುದಿಲ್ಲ. ಇದೇ ಕಾರಣಕ್ಕೆ ಎಂಒ4 ತಳಿಯ ಬಿತ್ತನೆ ಬೀಜವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಹೊಸ ತಳಿಗಳನ್ನು ಕೃಷಿ ಇಲಾಖೆಯು ಹಡಿಲು ಬಿದ್ದ ಭೂಮಿಗಳಲ್ಲಿ ಪ್ರಯೋಗ ಮಾಡಿ ರೈತರಲ್ಲಿ ವಿಶ್ವಾಸ ಮೂಡಿಸಬೇಕು ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘದ ಕಾರ್ಯದರ್ಶಿ ರವೀಂದ್ರ ಗುಜ್ಜರಬೆಟ್ಟು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.