ಶಿರ್ವ: ಉದ್ಯಾವರ ಮಾಂಗೋಡು ವಾಸುಕಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಉಡುಪಿ ಫಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ, ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ ಹಾಗೂ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಸುಬ್ರಹ್ಮಣ್ಯ ದೇವರಿಗೆ ಬ್ರಹ್ಮಕಲಶ ನಡೆಯಿತು.

ಬೆಳಗ್ಗೆ ಋತ್ವಿಖರಿಂದ ಗಣಯಾಗ, ಸುಬ್ರಹ್ಮಣ್ಯ ಸಹಸ್ರನಾಮ, ಹೋಮಾದಿಗಳು ನಡೆದು ವೃಶ್ಚಿಕ ಲಗ್ನದಲ್ಲಿ ದೇವರಿಗೆ ಬ್ರಹ್ಮಕಲಶಾಭಿಷೇಕ ಬಳಿಕ ಮಹಾ ಅನ್ನಸಂತರ್ಪಣೆ ನಡೆಯಿತು. ಪಾಡಿಗಾರು ಶ್ರೀನಿವಾಸ ತಂತ್ರಿಗಳ ನೇತೃತ್ವದಲ್ಲಿ ಪವಿತ್ರಪಾಣಿ ಸುಬ್ರಹ್ಮಣ್ಯ ಪಾಡಿತ್ತಾಯ ಮತ್ತು ಪ್ರಧಾನ ಅರ್ಚಕ ಗುರುಪ್ರಸಾದ್ ಆಚಾರ್ಯ ಅವರ ಸಹಕಾರದಲ್ಲಿ ಧಾರ್ಮಿಕ ವಿಧಿಗಳು ನಡೆದವು.

ಏಕಪವಿತ್ರ ನಾಗಮಂಡಲ: ದೇವಸ್ಥಾನದಲ್ಲಿ ಸೋಮವಾರ ಸಂಜೆ ಹಾಲಿಟ್ಟು ಸೇವೆ ಬಳಿಕ ದೇವಸ್ಥಾನದ ಮುಂಭಾಗದ ಮಂಟಪದಲ್ಲಿ ನಾಗಪಾತ್ರಿ ಸಗ್ರಿ ಗೋಪಾಲಕೃಷ್ಣ ಸಾಮಗ, ನಾಗ ಕನ್ನಿಕೆ ಮತ್ತು ಡಮರು ಮೇಳವು ಮುದ್ದೂರು ಬಾಲಕೃಷ್ಣ ವೈದ್ಯರು ಮತ್ತು ಬಳಗದವರಿಂದ ಏಕಪವಿತ್ರ ನಾಗಮಂಡಲ ನಡೆಯಿತು.

ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹಿರಿಯಣ್ಣ ಟಿ. ಕಿದಿಯೂರು, ಕಾರ್ಯಾಧ್ಯಕ್ಷ ಹರಿಯಪ್ಪ ಕೋಟ್ಯಾನ್, ಆನಂದ ಪಿ. ಸುವರ್ಣ, ಪ್ರಧಾನ ಕಾರ್ಯದರ್ಶಿ ಪ್ರತಾಪ್ ಕುಮಾರ್, ಕೋಶಾಧಿಕಾರಿ ಸಂತೋಷ್ ಕುಮಾರ್, ಜತೆ ಕಾರ್ಯದರ್ಶಿಗಳಾದ ರಮೇಶ ಆಚಾರ್ಯ, ಸುರೇಶ್ ಮೆಂಡನ್, ಗಿರಿರಾಜ್, ಸಮಿತಿಯ ಪ್ರಮುಖರಾದ ಜಗನ್ನಾಥ ಕಡೆಕಾರ್, ಗಣೇಶ್ ಕಮಾರ್, ಸುಧಾಕರ ಮೆಂಡನ್, ರಮೇಶ್ ಕೋಟ್ಯಾನ್, ದೇಗುಲದ ಟ್ರಸ್ಟಿಗಳಾದ ಸುಬ್ರಹ್ಮಣ್ಯ ನಾಯಕ್, ಹೇಮಲತಾ ಶಾಂತಕುಮಾರ್, ಜಯಶ್ರೀ ನಾಯಕ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.