ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂದಾಪುರ | ವಿವೇಕಾನಂದ ಆತ್ಮಜಾಗೃತಿ ತುಂಬಿದ ಸಂತ: ಕೇಶವ ಬಂಗೇರ

Last Updated 13 ಜನವರಿ 2023, 6:26 IST
ಅಕ್ಷರ ಗಾತ್ರ

ಕುಂದಾಪುರ: ಪಾಶ್ಚಾತ್ಯರಿಂದಾಗಿ ಆತ್ಮ ವಿಸ್ಮೃತಿಗೆ ಒಳಗಾಗಿ, ದೇಶದ ಬಗ್ಗೆ ಹೊಂದಿದ್ದ ನಕಾರಾತ್ಮಕ ಭಾವನೆಯನ್ನು ದೂರವಾಗಿಸಿ ಭಾರತೀಯರಲ್ಲಿ ಆತ್ಮ ಜಾಗೃತಿ ತುಂಬಿದ ಅಪರೂಪದ ಸಂತ ವಿವೇಕಾನಂದರು ಎಂದು ಎಬಿವಿಪಿ ಮಂಗಳೂರು ವಿಭಾಗ ಪ್ರಮುಖ್ ಕೇಶವ ಬಂಗೇರ ಹೇಳಿದರು.

ಎಬಿವಿಪಿ ವತಿಯಿಂದ ಗುರುವಾರ ಇಲ್ಲಿನ ಬಂಟ ಯಾನೆ ನಾಡವರ ಸಂಘದ ಆರ್.ಎನ್.ಶೆಟ್ಟಿ ಸಭಾಂಗಣದಲ್ಲಿ ನಡೆದ ಯುವ ಜಾಗೃತಿ ವಿದ್ಯಾರ್ಥಿ ಸಮಾವೇಶದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಉದ್ಯಮಿ ಗಣೇಶ್ ಕಿಣಿ ಬೆಳ್ವೆ ಮಾತನಾಡಿ, ತಾಯಿ ಭಾರತಿಯನ್ನು ಪೂಜಿಸುವುದರಿಂದ ದೊರಕುವ ಪ್ರತಿಫಲದ ರೂಪವೇ ದೇವರು. ಭಗವಂತ ಬಡವರ ಹಾಗೂ ದೀನರ ರೂಪದಲ್ಲಿರುವ ಕಾರಣ ಅವರ ಸೇವೆ ಮಾಡುವುದರಿಂದ ಭಗವಂತನ ಸಾಕ್ಷಾತ್ಕಾರವಾಗುತ್ತದೆ ಎಂದರು.

ಧರ್ಮೋತ್ಥಾನ ಸಂಸ್ಥೆ ಬೆಂಗಳೂರಿನ ರಾಜೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಆರ್‌ಎಸ್‍ಎಸ್ ಸಂಘ ಚಾಲಕ ಸತೀಶ್ಚಂದ್ರ ಕಾಳಾವರ್ಕರ್ ಮುಖ್ಯ ಅತಿಥಿಯಾಗಿದ್ದರು. ಎಬಿವಿಪಿ ತಾಲ್ಲೂಕು ಘಟಕದ ಸಂಚಾಲಕ ಧನುಷ್ ಪೂಜಾರಿ ಸ್ವಾಗತಿಸಿದರು. ತಾಲ್ಲೂಕು ಸಂಪರ್ಕ ಪ್ರಮುಖ್ ರಾಹುಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯ ಕಾರ್ಯಕಾರಿಣಿ ಸದಸ್ಯ ವಿಘ್ನೇಶ್ ಶೆಟ್ಟಿ ವಂದಿಸಿದರು. ಡಾ.ಬಿ.ಬಿ. ಹೆಗ್ಡೆ ಕಾಲೇಜಿನ ವಿದ್ಯಾರ್ಥಿನಿ ಪ್ರಮುಖ್ ಅನುಷಾ ನಿರೂಪಿಸಿದರು.

ನಗರದ ಪ್ರಮುಖ ಬೀದಿಗಳಲ್ಲಿ ವಿದ್ಯಾರ್ಥಿಗಳು ಶೋಭಾಯಾತ್ರೆ ನಡೆಸಿದರು. ಯಾತ್ರೆಯಲ್ಲಿ ನಾಸಿಕ್ ಬ್ಯಾಂಡ್, ಕೇರಳದ ಚಂಡೆ, ಭಜನಾ ತಂಡಗಳೊಂದಿಗೆ ಸಾವಿರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT