ಅಡಿಕೆ, ಕಾಳುಮೆಣಸಿಗೆ ಕೊಳೆರೋಗ: ಪರಿಹಾರಕ್ಕೆ ಒತ್ತಾಯಿಸಿ ರೈತರ ಬೃಹತ್ ಸಭೆ 

7
ರೋಗ ತಡೆಗಟ್ಟಲು ನಿರ್ದಿಷ್ಟ ಔಷಧ ಕಂಡುಹಿಡಿಯವಲ್ಲಿ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ವಿಫಲ

ಅಡಿಕೆ, ಕಾಳುಮೆಣಸಿಗೆ ಕೊಳೆರೋಗ: ಪರಿಹಾರಕ್ಕೆ ಒತ್ತಾಯಿಸಿ ರೈತರ ಬೃಹತ್ ಸಭೆ 

Published:
Updated:

ಶಿರಸಿ: ಅಡಿಕೆ, ಕಾಳುಮೆಣಸು ಬೆಳೆಗೆ ತಗುಲಿದ ಕೊಳೆರೋಗಕ್ಕೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ರೈತರ ಬೃಹತ್ ಸಭೆ ಶನಿವಾರ ನಡೆಯಿತು.

ಕೊಳೆರೋಗ ಬಂದು ಅಡಿಕೆ ಬೆಳೆ ಕೈ ಕಚ್ಚಿದೆ, ಕಾಳುಮೆಣಸು ಬಳ್ಳಿ ಇನ್ನು 4-5 ವರ್ಷ ಬೆಳೆ ಬರದಷ್ಟು ಸೊರಗಿದೆ ಎಂದು ರೈತರು ಅಭಿಪ್ರಾಯಪಟ್ಟರು. 

ವಿಜ್ಞಾನಿಗಳು ವಿಫಲ

ತೋಟಗಾರಿಕಾ ವಿಶ್ವವಿದ್ಯಾಲಯದ ವಿಜ್ಞಾನಿಗಳು ಅಡಿಕೆಗೆ ಬಂದಿರುವ ರೋಗ ತಡೆಗಟ್ಟಲು ನಿರ್ದಿಷ್ಟ ಔಷಧ ಕಂಡುಹಿಡಿಯಲು ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ.ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಟಿಎಸ್ ಎಸ್ ಅಧ್ಯಕ್ಷ ಶಾಂತಾರಾಮ‌ ಹೆಗಡೆ, ಕೆಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಭಾಸ್ಕರ ಹೆಗಡೆ, ಪ್ರಮುಖರಾದ ಜಿ.ಎನ್. ಹೆಗಡೆ, ಭೀಮಣ್ಣ ನಾಯ್ಕ ಉಪಸ್ಥಿತರಿದ್ದರು. 

ಸಭೆಯ ನಂತರ ರೈತರು ಮೆರವಣಿಗೆಯಲ್ಲಿ ಸಾಗಿ ಉಪವಿಭಾಗಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಿದ್ದಾರೆ. ಎಲ್ಲ ಪ್ರಮುಖ ಪಕ್ಷಗಳ ಮುಖಂಡರು ಭಾಗಿಯಾಗಿದ್ದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !