ಹಳಿಯಾಳ: ತಾಲ್ಲೂಕಿನ ಭಾಗವತಿ ಅರಣ್ಯ ವಲಯ ವ್ಯಾಪ್ತಿಯ ಭೀಮನಳ್ಳಿಯಲ್ಲಿ, ಸಹಾಯಕ ಉಪ ವಲಯ ಅರಣ್ಯಾಧಿಕಾರಿ ಸ್ನೇಹಾ ಶಿವಾಜಿ ತಳವಾರ ಅವರ ಮೇಲೆ ಅರಣ್ಯ ಅತಿಕ್ರಮಣಕಾರರು ಬುಧವಾರ ಹಲ್ಲೆ ಮಾಡಿದ್ದಾರೆ.

ಅರಣ್ಯ ಇಲಾಖೆಯಿಂದ ಸಸಿ ನೆಡಲು ಇಲಾಖೆಯ ಸಿಬ್ಬಂದಿಯೊಂದಿಗೆ ಅವರು ತೆರಳಿದ್ದರು. ಇದಕ್ಕೆ ಅರಣ್ಯ ಅತಿಕ್ರಮಣಕಾರರು ಅಡ್ಡಿ ಪಡಿಸಿ ಹಲ್ಲೆ ಮಾಡಿದರು ಎಂದು ದೂರಲಾಗಿದೆ. ಗಾಯಗೊಂಡ ಅಧಿಕಾರಿಯು ಹಳಿಯಾಳ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲ್ಲೆ ವಿಚಾರ ತಿಳಿಯುತ್ತಿದಂತೆ ಅರಣ್ಯ ಇಲಾಖೆ ಸಿಬ್ಬಂದಿ ತಾಲ್ಲೂಲು ಆಸ್ಪತ್ರೆಗೆ ಧಾವಿಸಿದ್ದಾರೆ.

ಈ ಕುರಿತು ಹಳಿಯಾಳ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಲಾಗುತ್ತಿದೆ. ಹಳಿಯಾಳ ಡಿ.ಸಿ.ಎಫ್ ಡಾ.ಅಜ್ಜಯ್ಯ ಜಿ.ಆರ್, ಎ.ಸಿ.ಎಫ್ ಡಾ.ಸಂತೋಷ ಚವ್ಹಾಣ ಮತ್ತು ಇತರ ಹಿರಿಯ ಅಧಿಕಾರಿಗಳ ತಂಡ ಆಸ್ಪತ್ರೆಗೆ ತೆರಳಿ ಯೋಗಕ್ಷೇಮ ವಿಚಾರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.