ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರವಾರ: ಆಳಸಮುದ್ರದಲ್ಲಿ ಐವರು ಮೀನುಗಾರರ ರಕ್ಷಣೆ

ಸ್ಥಗಿತಗೊಂಡ ದೋಣಿಯ ಎಂಜಿನ್ ದುರಸ್ತಿ ಮಾಡಿದ ಗೋವಾ ಮೀನುಗಾರರು
Last Updated 5 ಡಿಸೆಂಬರ್ 2019, 13:14 IST
ಅಕ್ಷರ ಗಾತ್ರ

ಕಾರವಾರ: ಎಂಜಿನ್ ಕೆಟ್ಟುಹೋದ ಪರಿಣಾಮಆಳಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ್ದಮೀನುಗಾರಿಕಾ ದೋಣಿಹಾಗೂ ಅದರಲ್ಲಿದ್ದ ಐವರು ಮೀನುಗಾರರನ್ನು, ಸಮೀಪದಲ್ಲೇ ಇದ್ದ ಮತ್ತೊಂದು ದೋಣಿಯಮೀನುಗಾರರು ಗುರುವಾರ ರಕ್ಷಿಸಿದ್ದಾರೆ.

ಕಾರವಾರ ತಾಲ್ಲೂಕಿನ ಮುದಗಾದ ‘ಶ್ರೀ ಗುಡಿದೇವ’ಹೆಸರಿನ ದೋಣಿಯು ಆಳಸಮುದ್ರ ಮೀನುಗಾರಿಕೆಗೆ ಬುಧವಾರ ಹೊರಟಿತ್ತು. ಅದರಲ್ಲಿದ್ದ ಮೀನುಗಾರರು ತಮ್ಮ ಪರಿಚಯಸ್ಥರೊಂದಿಗೆ ರಾತ್ರಿ 10.30ರವರೆಗೂ ಮೊಬೈಲ್ ಫೋನ್ ಮೂಲಕ ಮಾತನಾಡಿದ್ದರು. ಆದರೆ, ಗುರುವಾರ ಬೆಳಿಗ್ಗೆಯಿಂದ ಸಂ‍ಪರ್ಕಕ್ಕೆ ಸಿಗದ ಕಾರಣ ಆತಂಕ ಮನೆ ಮಾಡಿತ್ತು.

ಈ ಬಗ್ಗೆ ಮೀನುಗಾರಿಕಾ ಇಲಾಖೆ ಹಾಗೂಕರಾವಳಿ ಕಾವಲು ಪಡೆಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ಅವರು ಹುಡುಕಾಟ ಶುರು ಮಾಡುವಷ್ಟರಲ್ಲಿ ಬೈತಖೋಲ್ ಬಂದರಿಗೆ ದೋಣಿಯು ಮರಳಿತ್ತು.ದೋಣಿಯು ಅಮದಳ್ಳಿಯ ಗಣೇಶ ಛಾಯಾ ಕೊಡಾರಕರಅವರಿಗೆ ಸೇರಿದ್ದು, ಬೈತಖೋಲ್‌ ಹಾಗೂ ಕೊಪ್ಪಳದ ಮೀನುಗಾರರಿದ್ದರು.

ವ್ಯಾಪ್ತಿದಾಟಿತ್ತು: ಮೀನುಗಾರಿಕಾ ದೋಣಿಗಳಿಗೆ ಸಮುದ್ರದ ದಡದಿಂದ 12 ನಾಟಿಕಲ್ ಮೈಲುಗಳಷ್ಟು ದೂರ ಸಾಗಲು ಅವಕಾಶವಿದೆ. ಆದರೆ,‘ಶ್ರೀ ಗುಡಿದೇವ’ ದೋಣಿಯ ಎಂಜಿನ್ ಸ್ಥಗಿತಗೊಂಡ ಕಾರಣ ನಿಯಂತ್ರಣಕ್ಕೆ ಸಿಗದೇ ಈ ವ್ಯಾಪ್ತಿಯನ್ನು ಮೀರಿ ಕೆಲವು ಮೀಟರ್‌ಗಳಷ್ಟು ಮುಂದೆ ಸಾಗಿತ್ತು. ಅದು ದೊಡ್ಡ ಹಡಗುಗಳು ಸಂಚರಿಸುವ ಮಾರ್ಗವಾದ್ದರಿಂದ ಮತ್ತಷ್ಟು ಆತಂಕಮೂಡಿತ್ತುಎಂದು ಮೀನುಗಾರ ವಿನಾಯಕ ಹರಿಕಂತ್ರ ಮಾಹಿತಿ ನೀಡಿದರು.

ಇದನ್ನು ಗಮನಿಸಿದ, ಸಮೀಪದಲ್ಲೇ ಇದ್ದ ಗೋವಾದ ‘ಲಿಬಿಯಾ’ ಎಂಬ ಪರ್ಸೀನ್ ದೋಣಿಯ ಮೀನುಗಾರರು ರಕ್ಷಣೆಗೆ ಧಾವಿಸಿದರು. ‘ಗುಡಿದೇವ’ ದೋಣಿಯ ಎಂಜಿನ್ ಅನ್ನು ದುರಸ್ತಿಗೊಳಿಸಿ ಚಾಲೂ ಮಾಡಿದರು. ಈ ಮೂಲಕ ಮೀನುಗಾರರು ಸುರಕ್ಷಿತವಾಗಿ ದಡ ಸೇರಲು ಸಹಕರಿಸಿದರು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT