ಬುಧವಾರ, ಜನವರಿ 20, 2021
29 °C

ಬಿಜೆಪಿ ಎಷ್ಟಾದರೂ ನಿಗಮ ಮಾಡಬಹುದು: ಡಿಕೆಶಿ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ಬಿ.ಜೆ.ಪಿ.ಯವರಿಗೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಬಹಳ ಶಕ್ತಿಯಿದೆ. ಅವರು ಎಷ್ಟು ಬೇಕಾದರೂ ನಿಗಮಗಳು, ಯಾವ ಸಮಾಜಕ್ಕಾದರೂ ಸ್ಥಾನಮಾನಗಳನ್ನು ಕೊಡಬಹುದು’ ಎಂದು ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಗಿ ಹೇಳಿದರು.

ಶಿರಸಿಯಲ್ಲಿ ಶನಿವಾರ ನಡೆಯಲಿರುವ ಪಕ್ಷದ ಸಭೆಯಲ್ಲಿ ಭಾಗವಹಿಸಲು ಶುಕ್ರವಾರ ಸಂಜೆ ಕಾರವಾರಕ್ಕೆ ಅವರು ಬಂದಾಗ ಸುದ್ದಿಗಾರರ ಜೊತೆ ಮಾತನಾಡಿದರು.

‘ಬಿ.ಜೆ.ಪಿ.ಯ ಕಾರ್ಯಕ್ಕೆ ನಮ್ಮದೇನೂ ಅಭ್ಯಂತರವಿಲ್ಲ. ಅವರೇನು ಬೇಕಾದರೂ ಮಾಡಲಿ. ಅವರು ತಮ್ಮನ್ನು ತಾವು ಸರ್ವತಂತ್ರ ಸ್ವತಂತ್ರರು ಎಂದುಕೊಂಡಿದ್ದಾರೆ. ಅವರ ಬಳಿ ಅಧಿಕಾರವಿದೆ. ಅದೇನು ಮಾಡುತ್ತಾರೋ ಎಲ್ಲವನ್ನೂ ಮಾಡಲಿ, ನೋಡೋಣ’ ಎಂದು ಹೇಳಿದರು.

ಬಿ.ಜೆ.ಪಿ.ಯಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ಮಾತುಗಳು ಕೇಳಿಬರುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಆ ಪಕ್ಷದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ನನಗೇನೂ ಗೊತ್ತಿಲ್ಲ. ಆದರೆ, ಇಲ್ಲಿಂದ (ಬೇರೆ ಪಕ್ಷಗಳಿಂದ) ಹೋದ ಕೆಲವರು ಅವರಿಗೇನು ಉಡುಗೊರೆ ಕೊಡಬೇಕೋ ಅದನ್ನು ಕೊಡುತ್ತಾರೆ’ ಎಂದು ವ್ಯಂಗ್ಯವಾಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು