ಕಾರವಾರ: ಇಲ್ಲಿನ ಐ.ಎನ್.ಎಸ್ ಕದಂಬ ನೌಕಾನೆಲೆಯ ನೌಕೆ ದುರಸ್ತಿ ಯಾರ್ಡ್, ತನ್ನ ಮೊದಲ ಪ್ರಯತ್ನದಲ್ಲೇ ಪ್ರತಿಷ್ಠಿತ ‘ಗುಣಮಟ್ಟದ ಪರಿಕಲ್ಪನೆಗಳಿಗಾಗಿ ಅಂತರರಾಷ್ಟ್ರೀಯ ಸಮಾವೇಶ 2022’ಕ್ಕೆ ಆಯ್ಕೆಯಾಗಿದೆ. ಸಮಾವೇಶವು ಇಂಡೋನೇಷ್ಯದಲ್ಲಿ ಈ ವರ್ಷ ಆಯೋಜನೆಯಾಗಲಿದೆ.

ನೌಕೆ ದುರಸ್ತಿ ಯಾರ್ಡ್‌ನ ಗುಣಮಟ್ಟ ನಿಯಂತ್ರಣದ ತಂಡ ‘ಸಾಹಸ್’, ಕಳೆದ ವರ್ಷ ಡಿ.27ರಿಂದ ಡಿ.30ರ ತನಕ ಕೊಯಮತ್ತೂರಿನಲ್ಲಿ ನಡೆದ 35ನೇ ಸಮಾವೇಶದಲ್ಲಿ ಭಾಗವಹಿಸಿ ಬಹುಮಾನ ಪಡೆದಿತ್ತು. ಇದಕ್ಕೂ ಮೊದಲು ಮೈಸೂರಿನಲ್ಲಿ ನಡೆದ ವಿಭಾಗಮಟ್ಟದ ಸಮಾವೇಶದಲ್ಲಿ ಬಂಗಾರದ ಪದಕ ಪಡೆದುಕೊಂಡಿತ್ತು. ಈ ಸಮಾವೇಶಗಳನ್ನು ‘ಕ್ವಾಲಿಟಿ ಸರ್ಕಲ್ ಫೋರಮ್ ಆಫ್ ಇಂಡಿಯಾ’ ಆಯೋಜಿಸಿತ್ತು.

ಸಾಹಸ್ ತಂಡದಲ್ಲಿ ಕಮಾಂಡರ್ ಗಿರೀಶ ಜಾಧವ್, ಸಿಬ್ಬಂದಿ ಸುರೇಂದ್ರ ಸಿಂಗ್, ದಿನಕರ್ ಹಾಗೂ ಇತರ ಐವರಿದ್ದಾರೆ. ಈ ತಂಡವು, ‘ವಾಟರ್ ಜೆಟ್ ಫಾಸ್ಟ್ ಅಟ್ಯಾಕ್ ಕ್ರಾಫ್ಟ್‌ನಲ್ಲಿ (ಡಬ್ಲ್ಯು.ಜೆ.ಎಫ್.ಎ.ಸಿ) ಇಂಜೆಕ್ಷನ್ ಪಂಪ್ ಅಳವಡಿಕೆ’ ಎಂಬ ವಿಷಯದಲ್ಲಿ ಅಧ್ಯಯನ ವರದಿಯನ್ನು ಮಂಡಿಸಿತ್ತು.

ಕ್ವಾಲಿಟಿ ಸರ್ಕಲ್ ಫೋರಮ್ ಆಫ್ ಇಂಡಿಯಾವು, ಕೈಗಾರಿಕೆಗಳಲ್ಲಿ ತಯಾರಿಕೆ, ಸೇವೆ ಮತ್ತು ಆಡಳಿತ ವಿಭಾಗದಲ್ಲಿ ಎದುರಾಗುವ ಸಮಸ್ಯೆಗಳು ಹಾಗೂ ಅವುಗಳಿಗೆ ಪರಿಹಾರದ ಬಗ್ಗೆ ಅವಲೋಕನ ಮಾಡುವ ಸಮಾನ ಮನಸ್ಕ ಉದ್ಯೋಗಿಗಳ ಸಂಘಟನೆಯಾಗಿದೆ. ಟಿ.ವಿ.ಎಸ್, ಐ.ಟಿ.ಸಿ, ಬಿ.ಇ.ಎಂ.ಎಲ್, ಬಿ.ಎಚ್.ಇ.ಎಲ್ ಮುಂತಾದ ಪ್ರಮುಖ ಸಂಸ್ಥೆಗಳೂ ಈ ಸಮಾವೇಶದಲ್ಲಿ ಭಾಗವಹಿಸುತ್ತವೆ. ಇದರಲ್ಲಿ ಈ ಬಾರಿ ದೇಶದ 497 ಬೃಹತ್ ಕೈಗಾರಿಕೆಗಳಿಂದ 2021 ತಂಡಗಳು ಸ್ಪರ್ಧಿಸಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.