ವೈದ್ಯರ ಕೊರತೆ ನೀಗಿಸಲು ಪ್ರಯತ್ನ

ಭಾನುವಾರ, ಜೂಲೈ 21, 2019
25 °C
ಜೊಯಿಡಾ: ಮೇಲ್ದರ್ಜೆಗೇರಿಸಿದ ತಾಲ್ಲೂಕು ಆಸ್ಪತ್ರೆ ಉದ್ಘಾಟಿಸಿದ ಸಚಿವ ದೇಶಪಾಂಡೆ

ವೈದ್ಯರ ಕೊರತೆ ನೀಗಿಸಲು ಪ್ರಯತ್ನ

Published:
Updated:
Prajavani

ಜೊಯಿಡಾ: ‘ವೈದ್ಯರ ಕೊರತೆ ರಾಜ್ಯದಾದ್ಯಂತ ಇದೆ. ಅದನ್ನು ಆದಷ್ಟು ಬೇಗ ನೀಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಜಿಲ್ಲೆಯ ಎಲ್ಲ ಆಸ್ಪತ್ರೆಗಳನ್ನು ಸೂಕ್ತ ಸೌಲಭ್ಯಗಳೊಂದಿಗೆ ಮೇಲ್ದರ್ಜೆಗೇರಿಸಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.

ಇಲ್ಲಿ 30ರಿಂದ 100 ಹಾಸಿಗೆಗಳಿಗೆ ₹ 6 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಿದ ತಾಲ್ಲೂಕು ಆಸ್ಪತ್ರೆ ಕಟ್ಟಡವನ್ನು ಹಾಗೂ ₹ 1.50 ಕೋಟಿ ಅನುದಾನದಲ್ಲಿ ನವೀಕರಿಸಲಾದ ಬಸ್ ನಿಲ್ದಾಣವನ್ನು ಶನಿವಾರ ಉದ್ಘಾಟಿಸಿದರು. ಇದೇವೇಳೆ ಕೃಷಿ ಅಭಿಯಾನ ರಥಕ್ಕೂ ಚಾಲನೆ ನೀಡಿದರು.

‘ತಾಲ್ಲೂಕಿನಲ್ಲಿ ಶಿಕ್ಷಣ ಮತ್ತು ಆರೋಗ್ಯ ಸೇವೆಗಳು ಎಲ್ಲರಿಗೂ ಸುಲಭವಾಗಿ ಸಿಗುವಂತೆ ಆಗಬೇಕು. ಈ ಆಸ್ಪತ್ರೆಗೆ ಅಗತ್ಯವಿರುವ ವೈದ್ಯರನ್ನು ನಿಯೋಜಿಸಲು ಕ್ರಮ ವಹಿಸಲಾಗುವುದು’ ಎಂದು ಭರವಸೆ ನೀಡಿದರು.

‘ವಿವಿಧ ಕಾಮಗಾರಿಗಳು ಯಾವ ರೀತಿ ಆಗುತ್ತಿವೆ ಎಂಬುದನ್ನು ಸ್ಥಳಿಯರೇ ನೋಡಿ, ಕಳಪೆ ಎಂದು ಕಂಡುಬಂದರೆ ಕಾಮಗಾರಿ ನಿಲ್ಲಿಸಿ. ಕೆಲವು ಕಟ್ಟಡಗಳು ಮತ್ತು ಕಾಮಗಾರಿ ಕಳಪೆಯಾಗಿರುವ ಬಗ್ಗೆ ನನಗೆ ಮಾಹಿತಿ ದೊರೆತಿದೆ. ಜನರು ಅಂತಹ ಗುತ್ತಿಗೆದಾರರ ಮಾಹಿತಿಯನ್ನು ಜನಪ್ರತಿನಿಧಿಗಳ ಗಮನಕ್ಕೆ ತರಬೇಕು’ ಎಂದರು.

‘ಯಾರು ರಾಜೀನಾಮೆ ಕೊಟ್ಟರೆಂದು ತಿಳಿದಿಲ್ಲ’: ರಾಜ್ಯದ ಕಾಂಗ್ರೆಸ್ ಮತ್ತು ಜೆಡಿಎಸ್ ರಾಜೀನಾಮೆ ನೀಡುತ್ತಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ದೇಶಪಾಂಡೆ, ‘ರಾಜೀನಾಮೆ ಯಾರು ಕೊಟ್ಟರು, ಯಾಕಾಗಿ ಕೊಟ್ಟಿದ್ದಾರೆ ಎಂದು ನನಗೆ ಗೊತ್ತಿಲ್ಲ. ಅನವಶ್ಯಕವಾಗಿ ಊಹಾಪೋಹಗಳ ಬಗ್ಗೆ ಮಾತನಾಡುವುದು ಸರಿ ಅಲ್ಲ. ನಾನು, ನನ್ನ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಯಲ್ಲಿ ನಿರತನಾಗಿದ್ದೇನೆ. ಬೇಂಗಳೂರಿನಿಂದ ದೂರ ಇರುವ ಕಾರಣ ಅಲ್ಲಿನ ವಿಷಯ ಗೊತ್ತಿಲ್ಲ’ ಎಂದರು.

ಜಿಲ್ಲಾ ಪಂಚಾಯ್ತಿ ಉಪಾದ್ಯಕ್ಷ ಸಂತೋಷ ರೇಣಕೆ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ರಮೇಶ ನಾಯ್ಕ, ಸಂಜಯ ಹಣಬರ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ನರ್ಮದಾ ಪಾಟ್ನೇಕರ, ಉಪ ವಿಭಾಗಾಧಿಕಾರಿ ಅಭಿಜಿನ್, ಉಪಾದ್ಯಕ್ಷ ವಿಜಯ ಪಂಡಿತ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಶೈಲಾ ನಾಯ್ಕ, ತಾಲ್ಲೂಕು ಪಂಚಾಯ್ತಿ ಸದಸ್ಯೆ ಅಲ್ಕಂಜಾ ಮಂಥೇರೋ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಅಶೋಕ ಕುಮಾರ್, ತಹಶೀಲ್ದಾರ ಸಂಜಯ ಕಾಂಬಳೆ, ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಪ್ರಕಾಶ ಹಾಲಮ್ಮನವರ, ತಾಲ್ಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ.ವಿಜಯಕುಮಾರ್, ಡಾ.ಸಂಗಪ್ಪ ಗಾಬಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !