ದಾಂಡೇಲಿ: ಸುಂದರ ಬದುಕನ್ನು ವ್ಯಾಸನಗಳಿಗೆ ಬಲಿಕೊಡದೆ ಯುವ ಸಮೂಹದಿಂದ ವ್ಯಸನ ಮುಕ್ತ ಸಮಾಜ ನಿರ್ಮಾಣವಾಗಬೇಕು. ಯುವ ಜನತೆ ಜಾಗೃತರಾಗಬೇಕು ಎಂದು ದಾಂಡೇಲಿ ನಗರ ಠಾಣೆ ಪಿ.ಎಸ್.ಐ ಕಿರಣ ಪಾಟೀಲ ಹೇಳಿದರು.

ನಗರದ ಜನತಾ ವಿದ್ಯಾಲಯದ ರಾಮರೆಡ್ಡಿ ಸಭಾಭವನದಲ್ಲಿ ನಗರದ ಇನ್ನರ್ ವೀಲ್ ಕ್ಲಬ್, ರೋಟರಿ ಕ್ಲಬ್ ಹಾಗೂ ಜನತಾ ವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಮಾದಕ ವಸ್ತುಗಳ ವಿರೋಧಿ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರತಿಯೊಬ್ಬರು ಕಾನೂನನ್ನು ಗೌರವಿಸಿ ಬದುಕಿ ಈ ದಿಸೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವಪೂರ್ಣವಾಗಿದ್ದು, ವಿದ್ಯಾರ್ಥಿಗಳು ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದರು.

ಜನತಾ ವಿದ್ಯಾಲಯ ಪ್ರಾಚಾರ್ಯ ಅಮೃತ ರಾಮರಥ ಮಾತನಾಡಿದರು. ರೋಟರಿ ಕ್ಲಬ್ ನ ಅಧ್ಯಕ್ಷ ಅಶುತೋಷ್ ಕುಮಾರ್ ರಾಯ, ಕಾರ್ಯದರ್ಶಿ ಮಿಥುನ್ ನಾಯಕ, ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಶ್ವೇತಾ ಜಾಧವ, ಕಾರ್ಯದರ್ಶಿ ರೇಖಾ ಹೆಗಡೆ, ಪ್ರಮುಖರಾದ ಎಸ್.ಜಿ. ಬಿರಾದಾರ, ಸುಧಾಕರ ಶೆಟ್ಟಿ, ಉಪನ್ಯಾಸಕ ಉಪೇಂದ್ರ ಘೋರ್ಪಡೆ, ಇನ್ನರ್ ವೀಲ್ ಕ್ಲಬ್ ಪ್ರಮುಖರಾದ ಜ್ಯೋತಿ ಕಲ್ಲಣ್ಣನವರ, ಸ್ನೇಹಲ್ ಕಂಬದಕೋಣೆ, ವಿಜಯಲಕ್ಷ್ಮೀ ನಾಯಕವಾಡ, ಅನೂಷಾ ಮಾಡ್ದೋಳ್ಕರ, ಕರುಣಾ ಕಂಬದಕೋಣೆ ಇದ್ದರು. ಶ್ವೇತಾ ಜಾಧವ ಸ್ವಾಗತಿಸಿದರು. ರೇಖಾ ಹೆಗಡೆ ವಂದಿಸಿದರು. ನಿರೂಪಮಾ ನಾಯ್ಕ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.