ಅಂಕೋಲಾ: ‘ಶ್ರೀಮಂತರ ಮಕ್ಕಳು ಸಾಧನೆ ಮಾಡುವುದು ದೊಡ್ಡ ಕೆಲಸವಲ್ಲ. ಬಡವರ ಮನೆ ಮಕ್ಕಳು ಸಾಧನೆ ಮಾಡುವುದು ವಿಶೇಷ. ನಮ್ಮದು ಉಪ್ಪನ್ನು ನೀಡುವ ಮೂಲಕ ಪ್ರೀತಿ ಹಂಚಿದ ಸಮಾಜ ಎಂಬ ಹೆಮ್ಮೆ ಇದೆ’ ಎಂದು ಲೋಕೋಪಯೋಗಿ ಇಲಾಖೆಯ ಎಇಇ ರಾಮು ಅರ್ಗೇಕರ್ ಹೇಳಿದರು.

ಪಟ್ಟಣದ ಸ್ವಾತಂತ್ರ್ಯ ಸಂಗ್ರಾಮ ಸ್ಮಾರಕ ಭವನದಲ್ಲಿ ಈಚೆಗೆ ಜಿಲ್ಲಾ ಆಗೇರ ಸಮಾಜ ಅಭಿವೃದ್ಧಿ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಂಘಟನೆಯ ಸಲಹಾ ಸಮಿತಿ ಅಧ್ಯಕ್ಷ ಆರ್.ಜಿ.ಗುಂದಿ ಮಾತನಾಡಿ, ‘ಆಗೇರ ಸಮಾಜ ಅಭಿವೃದ್ಧಿ ಹೊಂದಬೇಕು ಎಂದರೆ ಆರ್ಥಿಕವಾಗಿ ಸಬಲರಾಗಬೇಕು. ಆಗೇರ ಸಮಾಜದವರಿಗೆ ಉಪ್ಪಿನ ಆಗರವೇ ಕರ್ಮ ಭೂಮಿ. ಈಚಿಗೆ ಸಮಾಜದವರು ಬದುಕಿನ ಅನಿವಾರ್ಯತೆಯಲ್ಲಿ ಬೇರೆ ಬೇರೆ ಕೆಲಸಗಳನ್ನು ಕಲಿತುಕೊಂಡಿದ್ದೇವೆ’ ಎಂದರು.

ಸಂಘಟನೆಯ ಸಂಘಟನಾಧ್ಯಕ್ಷ ಗುಣ ಆಗೇರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಮನೋಹರ್ ಆಗೇರ, ಸಂಘಟನೆಯ ಕಾರ್ಯಧ್ಯಕ್ಷ ಮಹಾದೇವ್ ಆಗೇರ, ಗೌರವಾಧ್ಯಕ್ಷ ಅರುಣ್ ಶೆಡಗೇರಿ, ಉಪಾಧ್ಯಕ್ಷ ಗಣಪತಿ ಆಗೇರ, ಜಗದೀಶ್ ಶಿರೋಡ್ಕರ್, ಗಣೇಶ್ ವಂದಿಗೆ, ಕೆಎಲ್ಇ ಕಾಲೇಜಿನ ಪ್ರಾಚಾರ್ಯೆ ಸರೋಜಿನಿ ಹಾರವಾಡೆಕರ್, ಶಾಂತಿ ಆಗೇರ, ವಾಮನ್ ಆಗೇರ, ಮಾರುತಿ ಆಗೇರ, ಈಶ್ವರ ವಂದಿಗೆ, ಯಾದವ ಲಕ್ಷ್ಮೇಶ್ವರ, ಹೊನ್ನಪ್ಪ ಆಗೇರ, ಮಂಜುನಾಥ್ ಶೇಡಗೇರಿ ಇದ್ದರು. ಜಯಶೀಲ ಆಗೇರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿಶಾಂತ್ ಆಗೇರ್ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.