ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಂಕೋಲಾ: ಆ್ಯಸಿಡ್ ತುಂಬಿದ್ದ ಟ್ಯಾಂಕರ್ ಪಲ್ಟಿ

Published : 30 ಆಗಸ್ಟ್ 2024, 15:28 IST
Last Updated : 30 ಆಗಸ್ಟ್ 2024, 15:28 IST
ಫಾಲೋ ಮಾಡಿ
Comments

ಅಂಕೋಲಾ: ತಾಲ್ಲೂಕಿನ ಕಂಚಿನಬಾಗಿಲ ಸಮೀಪ ರಾಷ್ಟ್ರೀಯ ಹೆದ್ದಾರಿ–69ರಲ್ಲಿ ಅಪಾಯಕಾರಿ ಸಲ್ಫ್ಯೂರಿಕ್ ಆ್ಯಸಿಡ್ ತುಂಬಿದ್ದ ಟ್ಯಾಂಕರ್ ಶುಕ್ರವಾರ ಪಲ್ಟಿಯಾಗಿದೆ.

‘ಆಂಧ್ರಪ್ರದೇಶದಿಂದ ಗೋವಾಕ್ಕೆ ಪೂರೈಸಲು ಆ್ಯಸಿಡ್‍ನ್ನು ಟ್ಯಾಂಕರ್ ಮೂಲಕ ಸಾಗಿಸಲಾಗುತ್ತಿತ್ತು. ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿದೆ. ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಆ್ಯಸಿಡ್ ಸೋರಿಕೆಯಾಗಿ ರಾಷ್ಟ್ರೀಯ ಹೆದ್ದಾರಿ ಪಕ್ಕದ ಚರಂಡಿಯಲ್ಲಿ ಹರಿದು ಹೊಗೆ ಆವರಿಸಿದೆ. ಸುಮಾರು 30 ಟನ್‍ಗಳಷ್ಟು ಸಲ್ಫ್ಯೂರಿಕ್ ಆ್ಯಸಿಡ್ ಟ್ಯಾಂಕರ್ ನಲ್ಲಿ ದಾಸ್ತಾನಿತ್ತು’ ಎಂದು ಪೊಲೀಸರು ತಿಳಿಸಿದ್ದಾರೆ.

‘ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಆ್ಯಸಿಡ್ ಚರಂಡಿ ಸೇರದಂತೆ ತಡೆದು ಪಕ್ಕದಲ್ಲಿ ಹೊಂಡ ತೆಗೆದು ಹಂತ ಹಂತವಾಗಿ ನಾಶ ಪಡಿಸಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT