ಭಟ್ಕಳ: ಉತ್ತರಪ್ರದೇಶದ ವಾರಣಾಸಿಯಲ್ಲಿ ಜುಲೈ. 17ರಿಂದ ಸೆ. 7ರತನಕ ನಡೆಯುವ 550ನೇ ಚಾತುರ್ಮಾಸ ಆಮಂತ್ರಣ ಪತ್ರಿಕೆಯನ್ನು ಭಟ್ಕಳದ ಗೋಪಿನಾಥ ತೀರದ ಶ್ರೀಮದ್ ನಾರಾಯಣ ತೀರ್ಥ ಹಾಗೂ ಶ್ರೀಮದ್ ಜೀವೋತ್ತಮ ತೀರ್ಥ ಸ್ವಾಮೀಜಿಗಳ ವೃಂದಾವನದ ಆವರಣದಲ್ಲಿ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಭಾನುವಾರ ಬಿಡುಗಡೆ ಮಾಡಿದರು.

ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠ ಪರಂಪರೆಯ ಮೊದಲ ಮಠ ವಾರಣಾಸಿಯಲ್ಲಿ ನಿರ್ಮಾಣವಾಗಿದೆ. ಸಂಸ್ಥಾನದ ಮಠದ 550ನೇ ವರ್ಷದ ಸವಿನೆನಪಿಗಾಗಿ ಈ ಬಾರಿ ಚಾತುರ್ಮಾಸ ವ್ರತವನ್ನು ವಾರಾಣಾಸಿಯಲ್ಲಿ ನಡೆಸಲಾಗುವುದು. ನಾರಾಯಣ ತೀರ್ಥ ಸ್ವಾಮೀಜಿಯವರ 508 ವರ್ಷದ ಪುಣ್ಯತಿಥಿಯಂದು ರಾಮದೇವ ವೀರ ವಿಠಲ ದೇವರ ಚರಣಕ್ಕೆ ಅರ್ಷಿಸಿ, ನಾರಾಯಣ ತೀರ್ಥ, ಜೀವೋತ್ತಮ ತೀರ್ಥ ಸ್ವಾಮೀಜಿಯವರ ಸನ್ನಿಧಿಯಲ್ಲಿ ಪೂಜಿಸಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಲಾಗಿದೆ. ಶ್ರೀಮದ್ ನಾರಾಯಣ ತೀರ್ಥ ಸ್ವಾಮೀಯವರ ಆಶೀರ್ವಾದದಿಂದ ಎಲ್ಲವೂ ಸುಗಮವಾಗಿ ನಡೆಯಲಿದೆ ಎಂದು ಶ್ರೀಗಳು ಹೇಳಿದರು.

ಈ ಸಂದರ್ಭದಲ್ಲಿ ಸಂಜಯ ಭಟ್, ಸಂತೋಷ ಆಚಾರ್ಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.