ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‍ ನಾಯಕರ ಮನಸ್ಥಿತಿ ಹಾಳಾಗಿದೆ: ಸೂಲಿಬೆಲೆ

Published 3 ಅಕ್ಟೋಬರ್ 2023, 15:41 IST
Last Updated 3 ಅಕ್ಟೋಬರ್ 2023, 15:41 IST
ಅಕ್ಷರ ಗಾತ್ರ

ಕಾರವಾರ: ‘ಮುಸ್ಲಿಮರ ಮನಸ್ಥಿತಿಗಿಂತ ಕಾಂಗ್ರೆಸ್‍ ನಾಯಕರ ಮನಸ್ಥಿತಿ ಹಾಳಾಗಿದೆ. ಕಾಂಗ್ರೆಸ್ ಸರ್ಕಾರದ ಅತಿಯಾದ ಮುಸ್ಲಿಂ ಓಲೈಕೆಯೇ ಶಿವಮೊಗ್ಗದ ಘಟನೆಗೆ ಕಾರಣ’ ಎಂದು ಯುವ ಬ್ರಿಗೇಡ್ ಪ್ರಮುಖ ಚಕ್ರವರ್ತಿ ಸೂಲಿಬೆಲೆ ಆರೋಪಿಸಿದರು.

ತಾಲ್ಲೂಕಿನ ಕಡವಾಡ ಗ್ರಾಮದಲ್ಲಿ ಮಂಗಳವಾರ ಮಾಧ್ಯಮದವರ ಜತೆ ಮಾತನಾಡಿದ ಅವರು, ‘ತಮ್ಮ ಬೆಂಗಾವಲಿಗೆ ಕಾಂಗ್ರೆಸ್ ಇದೆ ಎಂಬ ಕಾರಣಕ್ಕೆ ದುಷ್ಕರ್ಮಿಗಳ ಪುಂಡಾಟಿಕೆ ಹೆಚ್ಚಿದೆ. ಮುಸ್ಲಿಮರ ಓಲೈಕೆಗೆ ಕಾಂಗ್ರೆಸ್ ನಾಯಕರು ಪೈಪೋಟಿಗೆ ಬಿದ್ದವರಂತೆ ನಡೆದುಕೊಳ್ಳುತ್ತಿದ್ದಾರೆ. ಶಿವಮೊಗ್ಗದಲ್ಲಿ ನಡೆದ ಘಟನೆ ರಾಜ್ಯದಾದ್ಯಂತ ನಡೆದರೆ ಅಚ್ಚರಿ ಪಡಬೇಕಿಲ್ಲ’ ಎಂದರು.

‘ಶಿವಮೊಗ್ಗ ಸ್ಲೀಪರ್ ಸೆಲ್‍ಗಳ ಅಡ್ಡೆಯಾಗಿ ಮಾರ್ಪಡುತ್ತಿದೆ. ಕಳೆದ ಮೂರು–ನಾಲ್ಕು ವರ್ಷಗಳಿಂದ ಶಾಂತವಾಗಿದ್ದ ನಗರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಅಶಾಂತಿ ತಲೆದೋರುವ ಲಕ್ಷಣ ಗೋಚರಿಸಿದೆ. ಹಿಂದೂಗಳನ್ನು ಹೇಡಿಗಳಂತೆ ಬಿಂಬಿಸಲು ಮುಸ್ಲಿಂ ಸಮುದಾಯ ಪ್ರಯತ್ನಿಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಇದಕ್ಕೆ ಬೆಂಗಾವಲಾಗಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT