ದಾಂಡೇಲಿ: ಡಿ.13ರಿಂದ ಡಿ.15ರವರೆಗೆ ನಡೆಯಲಿರುವ ಉತ್ತರ ಕನ್ನಡ ಜಿಲ್ಲಾ 25ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನಗರ ಸಜ್ಜಾಗಿದೆ. ಹಳೇ ನಗರಸಭೆ ಮೈದಾನದಲ್ಲಿ ಅದ್ದೂರಿ ಮಂಟಪ ಹಾಕಿ ಸಮ್ಮೇಳನಕ್ಕೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.

ನಗರದ ಪ್ರಮುಖ ರಸ್ತೆಗಳಲ್ಲಿ ಕನ್ನಡ ಧ್ವಜಗಳು ರಾರಾಜಿಸುತ್ತಿವೆ. ಹಳೇ ನಗರಸಭೆ ಮೈದಾನದಲ್ಲಿ ವೇದಿಕೆ, ಮಳಿಗೆ ಹಾಕಲಾಗಿದೆ. ನುಡಿ ತೇರು ಎಳೆಯಲು ಸಕಲ ಸಿದ್ಧತೆ ಮಾಡಲಾಗಿದ್ದು, ಸಂಭ್ರಮ ಮನೆ ಮಾಡಿದೆ.

ಜಿಲ್ಲೆಯ ಹಿರಿಯ ಸಾಹಿತಿ ರೋಹಿದಾಸ ನಾಯ್ಕ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನವನ್ನು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಉದ್ಘಾಟಿಸಲಿದ್ದಾರೆ. ಮೂರು ದಿನಗಳ ಕಾರ್ಯಕ್ರಮದಲ್ಲಿ ಸಚಿವರು, ಶಾಸಕರು, ಜನಪ್ರತಿನಿಧಿಗಳು, ನಾಡಿನ ಹಿರಿಯ ಸಾಹಿತಿಗಳು, ಗಣ್ಯರು ಭಾಗವಹಿಸಲಿದ್ದಾರೆ. ಸಮ್ಮೇಳನ ಅಧ್ಯಕ್ಷರ ಮೆರವಣಿಗೆಯಲ್ಲಿ ನಾಡಿನ 10 ಕಲಾತಂಡಗಳು ಭಾಗವಹಿಸುವ ಮೂಲಕ ಮೆರವಣಿಗೆಗೆ ವಿಶೇಷವಾದ ಮೆರುಗು ತಂದು ಕೊಡಲಿದೆ.

ಸಮ್ಮೇಳನದಲ್ಲಿ 25 ಕನ್ನಡ ಸಾಹಿತ್ಯ ಕೃತಿಗಳು ಲೋಕಾರ್ಪಣೆಯಾಗಲಿದೆ. ಈ ಹಿಂದಿನ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಿಗೆ ಗೌರವ ಸನ್ಮಾನ ಹಾಗೂ ವಿವಿಧ ಕ್ಷೇತ್ರಗಳ 25 ಸಾಧಕರಿಗೆ ರಜತ ಗೌರವ ನೀಡಲಾಗುತ್ತದೆ. ನಾಡು– ನುಡಿ, ಭಾಷೆ ಹಾಗೂ ನಾಡಿನ ಸಮಗ್ರ ಅಭಿವೃದ್ಧಿಯ ಕುರಿತಂತೆ ವಿಚಾರಗೋಷ್ಠಿಗಳು ನಡೆಯಲಿವೆ. ನಾಲ್ಕು ಪ್ರಾಧಿಕಾರಗಳ ಅಧ್ಯಕ್ಷರು ಭಾಗವಹಿಸುತ್ತಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎನ್.ವಾಸರೆ ತಿಳಿಸಿದ್ದಾರೆ.

Quote - ಸಮ್ಮೇಳನವನ್ನು ವಿಜೃಂಭಣೆಯಿಂದ ನಡೆಸಲು ಎಲ್ಲಾ ಸಿದ್ಧತೆ ಕೈಗೊಳ್ಳಲಾಗಿದೆ. ಪ್ರತಿಯೊಬ್ಬ ಸಾಹಿತ್ಯ ಪ್ರೇಮಿಗಳು ಭಾಗವಹಿಸಿ ಯಶಸ್ವಿಗೊಳಿಸಬೇಕು ಶೈಲೇಶ ಪರಮಾನಂದ ತಹಶೀಲ್ದಾರ್ ಹಾಗೂ ಸಮ್ಮೇಳನದ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ

Cut-off box - ಸಮ್ಮೇಳನಾಧ್ಯಕ್ಷರ ಪರಿಚಯ ಆಡಳಿತ ಸಂಘಟನೆ ಸಾಹಿತ್ಯದ ಮೂಲಕ ಜಿಲ್ಲೆಗೆ ಪರಿಚಿತರಾಗಿರುವ ರೋಹಿದಾಸ ನಾಯ್ಕ ಅವರು ಅಬಕಾರಿ ಇಲಾಖೆಯಲ್ಲಿ ಹಿರಿಯ ಉಪ ಆಯುಕ್ತರಾಗಿ ಸೇವೆ ಸಲ್ಲಿಸಿ 2002ರಲ್ಲಿ ನಿವೃತ್ತಿ ಹೊಂದಿದ್ದಾರೆ. ಮಾಸ್ತಣ್ಣ ಹಾಗೂ ಇತರ ಕಥೆಗಳು ಕರೆಯದೆ ಬರುವವರು ಕತ್ತಲೆ ದಾರಿ ದೂರ ಕಥಾ– ಸಂಕಲನಗಳು ಪ್ರೇಮದ ಕನಸುಗಳು–ಕವನ ಸಂಕಲನ ನೀರ ನೆರಳು– ಕಾದಂಬರಿ ನಿರಂತರ ಭಾಷಣ ಕಲೆ ಕನ್ನಡ ಭಾಷಾಶಾಸ್ತ್ರ ಸಾರ ಸಂಪದ– ವೈಚಾರಿಕ ಲೇಖನಗಳು ಸೇರಿದಂತೆ ಅನೇಕ ಕೃತಿಗಳನ್ನು ರಚಿಸಿದ್ದಾರೆ. 2004ರಲ್ಲಿ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸತತ ಮೂರು ಬಾರಿ ಕನ್ನಡ ಸಾಹಿತ್ಯ ಪರಿಷತ್ತಿನ ಚುಕ್ಕಾಣಿ ಹಿಡಿದು ಮುನ್ನಡೆಸಿದ್ದಾರೆ. ಇವರ ‘ಸುರಂಗ ಚಕ್ರ’ ಕಥೆ ಚಲನಚಿತ್ರವಾಗಿದೆ. ಇವರ ಕುರಿತಾಗಿ ‘ಪ್ರತಿಭಾ ಸಂಪನ್ನ’ ಅಭಿನಂದನಾ ಗ್ರಂಥ ಹೊರತರಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.