ಕಾರವಾರ: ಗಣೇಶ ಚತುರ್ಥಿ ಆಚರಣೆಯ ಹಳೆಯ ಖರ್ಚಿನ ವಿಚಾರಕ್ಕೆ ಇಲ್ಲಿನ ಸಾಯಿಕಟ್ಟಾದಲ್ಲಿ ಶನಿವಾರ ಕುಟುಂಬವೊಂದರ ನಡುವೆ ಕಲಹ ನಡೆದು, ಯುವಕನೊಬ್ಬ ತನ್ನ ಸೋದರ ಸಂಬಂಧಿಯನ್ನು ಚಾಕುವಿನಿಂದ ಇರಿದು ಹತ್ಯೆಗೈದಿದ್ದಾರೆ.

ಶಿರಸಿ ಅಯ್ಯಪ್ಪ ನಗರದ, ಹಾನಗಲ್ನಲ್ಲಿ ಸರ್ವೇಯರ್ ಆಗಿದ್ದ ಸಂದೇಶ ಪ್ರಭಾಕರ ಬೋರಕರ್ (31) ಹತ್ಯೆಯಾದವರು. ಅವರ ಸಹೋದರನ ಪುತ್ರ ಮನೀಷ್ ಬೋರಕರ್ ಹತ್ಯೆಗೈದ ಆರೋಪಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮನೀಷ್ ಸೇರಿ ಅವರದೇ ಕುಟುಂಬದ ಐವರನ್ನು ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

‘ಶಿರಸಿ ಮೂಲದ ಒಂದೇ ಕುಟುಂಬಕ್ಕೆ ಸೇರಿದ್ದ ಹಲವರು ಗಣೇಶ ಚತುರ್ಥಿ ಆಚರಣೆಗೆ ಸೇರಿದ್ದ ವೇಳೆ ಹಳೆಯ ಖರ್ಚಿನ ₹8 ಸಾವಿರ ಹಣದ ವಿಚಾರವಾಗಿ ಕಲಹ ನಡೆದಿತ್ತು. ಈ ವೇಳೆ ಸಂದೇಶ ಎಂಬುವವರ ಹತ್ಯೆ ನಡೆದಿದೆ. ಘಟನೆಗೆ ಸಂಬಂಧಿಸಿ ಹತ್ಯೆಗೈದ ಮನೀಷ್, ಅವರ ತಂದೆ ಕಿರಣ್ ಬೋರಕರ್, ಚಿಕ್ಕಪ್ಪಂದಿರಾದ ರತನ್ ಬೋರಕರ್, ಪ್ರಶಾಂತ ಬೋರಕರ್, ಸಂತೋಷ ಬೋರಕರ್ಎಂಬುವವರನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.