ಕಾರವಾರ: ಕುಮಟಾ ತಾಲ್ಲೂಕಿನ ತದಡಿ ಬಂದರಿನಿಂದ ಶುಕ್ರವಾರ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರಿಗೆ ಅಚ್ಚರಿ ಕಾದಿತ್ತು. ಬೃಹತ್ ಗಾತ್ರದ ‘ತಿಮಿಂಗಲ ಸೊರಾ’ (ವೇಲ್ ಶಾರ್ಕ್) ಮೀನೊಂದು ಬಲೆಗೆ ಬಿದ್ದಿತ್ತು.

ಗುಜರಾತ್ ಕರಾವಳಿಯಿಂದ ಕೇರಳದವರೆಗೂ ಕಾಣಸಿಗುವ ಈ ಮೀನುಗಳು ಬಲೆಗೆ ಬೀಳುವುದು ಅಪರೂಪ. ನೀರು ಸುಮಾರು 21 ಡಿಗ್ರಿ ಸೆಲ್ಷಿಯಸ್‌ಗಿಂದ ಕಡಿಮೆ ಉಷ್ಣಾಂಶವಿರುವ ಆಳ ಸಮುದ್ರದಲ್ಲಿ ಇವು ವಾಸಿಸುತ್ತವೆ. ಅಂದಾಜು 800 ಕೆ.ಜಿ.ಯಷ್ಟು ತೂಕವಿರುವ ಇವುಗಳನ್ನು, ಮತ್ಸ್ಯ ಸಂಕುಲದ ಅತಿದೊಡ್ಡ ಸದಸ್ಯರಲ್ಲಿ ಒಂದು ಎಂದು ಗುರುತಿಸಲಾಗಿದೆ.

ಅರಬ್ಬಿ ಸಮುದ್ರದಲ್ಲಿ ಹೆಚ್ಚಾಗಿ ಕಾಣಸಿಗುತ್ತಿದ್ದ ಈ ಪ್ರಭೇದದ ಮೀನುಗಳು, ಕೆಲವು ವರ್ಷಗಳಿಂದ ಅಪರೂಪವಾಗಿವೆ. ಹಾಗಾಗಿ ಅವುಗಳನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಗುರುತಿಸಲಾಗಿದ್ದು, ಬೇಟೆಯಾಡುವುದು ಅಪರಾಧವಾಗಿವೆ.

ಅಚಾನಕ್ ಆಗಿ ಬಲೆಗೆ ಬಿದ್ದರೂ ಅವುಗಳನ್ನು ಪುನಃ ನೀರಿಗೆ ಬಿಡಲಾಗುತ್ತದೆ. ತದಡಿಯ ಮೀನುಗಾರರೂ ತಮ್ಮ ಬಲೆಗೆ ಬಿದ್ದ ಮೀನನ್ನು ದೋಣಿಗೆ ಎಳೆದು ಬಲೆಯಿಂದ ಬಿಡಿಸಿ ಪುನಃ ನೀರಿಗೆ ಬಿಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.