ಕಾರವಾರ: ವರ್ಷದಿಂದ ವರ್ಷಕ್ಕೆ ಜಿಲ್ಲೆಯ ಸರ್ಕಾರಿ ಪದವಿಪೂರ್ವ ಕಾಲೇಜುಗಳಿಗೆ ಪ್ರವೇಶಾತಿ ಸಂಖ್ಯೆ ಏರಿಕೆಯಾಗುತ್ತಿದೆ. ಆದರೆ, ಕಾಯಂ ಉಪನ್ಯಾಸಕರ ಸಂಖ್ಯೆ ಕುಗ್ಗುತ್ತಿದೆ. ಕಾಯಂ ಉಪನ್ಯಾಸಕರಿಗಿಂತಲೂ ಹೆಚ್ಚಿರುವ ಅತಿಥಿ ಉಪನ್ಯಾಸಕರನ್ನು ಬೋಧನೆಗೆ ಅವಲಂಬಿಸುವ ಸ್ಥಿತಿ ಉಂಟಾಗಿದೆ.

ಸರ್ಕಾರಿ, ಅನುದಾನಿತ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುವ ಕಾಯಂ ಉಪನ್ಯಾಸಕರು ವಾರದಲ್ಲಿ ಕನಿಷ್ಠ 20 ತಾಸು ಬೋಧನೆ ಮಾಡಬೇಕಾಗುತ್ತದೆ. ಆದರೆ, ಅತಿಥಿ ಉಪನ್ಯಾಸಕರಿಗೆ 10 ತಾಸು ಮಾತ್ರ ಬೋಧನೆ ಅವಧಿ ನಿಗದಿಪಡಿಸಲಾಗಿದೆ. ವಿಜ್ಞಾನ ವಿಭಾಗದ ಉಪನ್ಯಾಸಕರಿದ್ದರೆ 12 ತಾಸುಗಳವರೆಗೆ ಪಾಠ ಮಾಡಬೇಕಾಗುತ್ತದೆ.

‘ಒಬ್ಬ ಕಾಯಂ ಉಪನ್ಯಾಸಕರ ಹುದ್ದೆಯ ಬದಲಾಗಿ ಇಬ್ಬರು ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಬೇಕಾಗುತ್ತದೆ. ಆದರೆ, ಬೇಡಿಕೆಗೆ ತಕ್ಕಷ್ಟು ಅತಿಥಿ ಉಪನ್ಯಾಸಕರ ಲಭ್ಯತೆ ಇಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವುದು ಸರ್ಕಾರಿ ಕಾಲೇಜುಗಳಲ್ಲಿ ಸವಾಲಾಗುತ್ತಿದೆ. ಅದರಲ್ಲಿಯೂ ಗಡಿಭಾಗದ ಕಾಲೇಜುಗಳಿಗೆ ಬರಲು ಉಪನ್ಯಾಸಕರು ಹಿಂದೇಟು ಹಾಕುತ್ತಿದ್ದಾರೆ’ ಎಂದು ಸರ್ಕಾರಿ ಕಾಲೇಜಿನ ಪ್ರಾಚಾರ್ಯರೊಬ್ಬರು ಸಮಸ್ಯೆ ಹೇಳಿಕೊಂಡರು.

ಜಿಲ್ಲೆಯಲ್ಲಿ 108 ಪದವಿಪೂರ್ವ ಕಾಲೇಜುಗಳಿದ್ದು, ಅವುಗಳ ಪೈಕಿ 37 ಸರ್ಕಾರಿ ಕಾಲೇಜುಗಳು ಸೇರಿವೆ. ಈ 35ರ ಪೈಕಿ 25 ಕಾಲೇಜುಗಳಲ್ಲಿ ವಾಣಿಜ್ಯ ವಿಭಾಗಕ್ಕೆ ಕಾಯಂ ಉಪನ್ಯಾಸಕರೇ ಇಲ್ಲ. ವಿಜ್ಞಾನ ವಿಭಾಗದಲ್ಲೂ ಕೆಲ ವಿಷಯಗಳಿಗೆ ಕಾಯಂ ಉಪನ್ಯಾಸಕರ ಕೊರತೆ ಉಂಟಾಗಿದೆ.

ಸರ್ಕಾರಿ ಕಾಲೇಜುಗಳಲ್ಲಿನ ಒಟ್ಟು ಕಾಯಂ ಉಪನ್ಯಾಸಕರ ಸಂಖ್ಯೆ 210ರ ಆಸುಪಾಸಿನಲ್ಲಿದೆ. ಪ್ರಸಕ್ತ ಸಾಲಿನಲ್ಲಿ 240 ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲಾಗಿದೆ. ಕಳೆದ ವರ್ಷ 240ರಷ್ಟು ಕಾಯಂ ಉಪನ್ಯಾಸಕರಿದ್ದರು. 188 ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಲಾಗಿತ್ತು.

‘ಕೆಲ ತಿಂಗಳ ಹಿಂದೆ ನಡೆದ ವರ್ಗಾವಣೆ ಕೌನ್ಸೆಲಿಂಗ್ ವೇಳೆ ಜಿಲ್ಲೆಯ ಹಲವು ಸರ್ಕಾರಿ ಕಾಲೇಜುಗಳಿಂದ ಉಪನ್ಯಾಸಕರು ಬೇರೆ ಜಿಲ್ಲೆಗಳಿಗೆ ವರ್ಗಾವಣೆ ಪಡೆದುಕೊಂಡಿದ್ದಾರೆ. ಬಹುತೇಕರು ತವರು ಜಿಲ್ಲೆಗಳಿಗೆ ವರ್ಗವಾಗಿದ್ದಾರೆ. ಕೆಲವರು ನಿವೃತ್ತಿಯೂ ಆಗಿದ್ದಾರೆ. ಇದರಿಂದ ಕಳೆದೊಂದು ವರ್ಷದಲ್ಲಿ 25ರಿಂದ 30ರಷ್ಟು ಕಾಯಂ ಉಪನ್ಯಾಸಕರ ಸಂಖ್ಯೆ ಕಡಿಮೆಯಾಗಿದೆ’ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.