ರಸ್ತೆ ದುಸ್ಥಿತಿಯಿಂದ ಸಮಸ್ಯೆ!
‘ಮಳೆಯಿಂದ ಗ್ರಾಮೀಣ ಭಾಗದ ರಸ್ತೆಗಳು ಹೆದ್ದಾರಿಗಳು ಸಂಪೂರ್ಣ ಹದಗೆಟ್ಟಿವೆ. ಹೊಂಡ ಬಿದ್ದ ರಸ್ತೆಗಳಿಂದ ಬಸ್‌ಗಳ ಓಡಾಟಕ್ಕೆ ತೊಂದರೆಯಾಗುತ್ತಿವೆ. ಜೊತೆಗೆ ಬಸ್‌ಗಳ ಬಿಡಿಭಾಗಗಳು ಪದೇ ಪದೇ ಹಾಳಾಗಲು ಕಾರಣವಾಗುತ್ತಿದೆ’ ಎಂದು ಸಾರಿಗೆ ಸಂಸ್ಥೆಯ ಅಧಿಕಾರಿಯೊಬ್ಬರು ಹೇಳಿದರು. ‘ಬಸ್‌ವೊಂದನ್ನು ಗರಿಷ್ಠ 15 ವರ್ಷದವರೆಗೆ ಚಲಾಯಿಸಲು ಸಾಧ್ಯವಿದೆ. ಅವುಗಳಿಗೆ ಕಿ.ಮೀಗಳ ಮಿತಿ ಇಲ್ಲ. ಜಿಲ್ಲೆಯಲ್ಲಿ 10–15 ಲಕ್ಷ ಕಿ.ಮೀ ಸಂಚರಿಸಿದರೂ ಸುಸ್ಥಿತಿಯಲ್ಲಿರುವ ಬಸ್‌ಗಳಿವೆ. ಆದರೆ 15 ವರ್ಷಕ್ಕೆ ಮೇಲ್ಪಟ್ಟ ಒಂದೂ ಬಸ್ ಇಲ್ಲ’ ಎಂದು ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಬಸವರಾಜ ಅಮ್ಮನವರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.