ಕಾರವಾರ: ಜಿಲ್ಲೆಯಲ್ಲಿ ಹೊಸದಾಗಿ 14 ಮದ್ಯದಂಗಡಿಗಳನ್ನು ತೆರೆಯಲು ಸರ್ಕಾರ ಮುಂದಾಗಿದ್ದು, ಜ.16ರಂದು ಇ–ಹರಾಜು ಮೂಲಕ ಮದ್ಯದಂಗಡಿ ಸನ್ನದು ಹಂಚಿಕೆ ಮಾಡಲು ಸಿದ್ಧತೆ ನಡೆದಿದೆ.

ಕಾರವಾರ, ಶಿರಸಿ, ಅಂಕೋಲಾ, ದಾಂಡೇಲಿ, ಕುಮಟಾ, ಯಲ್ಲಾಪುರ ತಾಲ್ಲೂಕುಗಳಲ್ಲಿ ತಲಾ 2 ಹಾಗೂ ಹೊನ್ನಾವರ, ಭಟ್ಕಳದಲ್ಲಿ ತಲಾ ಒಂದು ಮದ್ಯದಂಗಡಿ (ಸಿಎಲ್2ಎ) ಸನ್ನದುಗಳ ಹಂಚಿಕೆಯಾಗಲಿದೆ. ಹರಾಜಿನಲ್ಲಿ ನಗರಸಭೆ ವ್ಯಾಪ್ತಿಯ ಪ್ರತಿ ಸನ್ನದಿಗೆ ₹90 ಲಕ್ಷ, ಪುರಸಭೆ ವ್ಯಾಪ್ತಿಗೆ ₹80 ಲಕ್ಷ, ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ₹70 ಲಕ್ಷ ನಿಗದಿಪಡಿಸಲಾಗಿದೆ.

‘ಇ–ಹರಾಜು ಮೂಲಕ ಹಂಚಿಕೆಯಾಗುವ ಮದ್ಯದಂಗಡಿ ಸನ್ನದು ಹೊಸದಾಗಿ ಮಂಜೂರಾಗಿದ್ದಲ್ಲ. ಈಗಾಗಲೆ ಮಂಜೂರಾಗಿ ಹಂಚಿಕೆಯಾಗದೆ ಉಳಿದಿರುವ ಹಾಗೂ ಸ್ಥಗಿತಗೊಂಡಿರುವ ಸನ್ನದುಗಳು’ ಎಂದು ಅಬಕಾರಿ ಇಲಾಖೆ ಹೇಳಿದೆ.

‘ಜಿಲ್ಲೆಯ 8 ತಾಲ್ಲೂಕುಗಳಲ್ಲಿ ಒಟ್ಟು 14 ಮದ್ಯದಂಗಡಿ ಸನ್ನದು ಹಂಚಿಕೆ ಮಾಡಲಾಗುತ್ತಿದೆ. ಅವುಗಳ ಪೈಕಿ 10 ಸಾಮಾನ್ಯ ವರ್ಗಕ್ಕೆ ಮೀಸಲಿದ್ದು, 3 ಪರಿಶಿಷ್ಟ ಜಾತಿಗೆ, 1 ಪರಿಶಿಷ್ಟ ಪಂಗಡಕ್ಕೆ ಮೀಸಲಿರಲಿದೆ. ಇ–ಹರಾಜು ಜ.16ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 12 ಗಂಟೆ ಅವಧಿಯಲ್ಲಿ ಭಾರತ ಸರ್ಕಾರದ ಎಂಎಸ್ಟಿಸಿ ಲಿಮಿಟೆಡ್ನ ಇ–ಪೋರ್ಟಲ್ ಮೂಲಕ ನಡೆಯಲಿದೆ’ ಎಂದು ಅಬಕಾರಿ ಉಪ ಆಯುಕ್ತ ಅಮಾನುಲ್ಲಾ ಖಾನ್ ತಿಳಿಸಿದ್ದಾರೆ.

‘14 ಸನ್ನದುಗಳಿಗೆ ಒಟ್ಟು ₹11.5 ಕೋಟಿ ಮೂಲಬೆಲೆ ನಿಗದಿಪಡಿಸಲಾಗಿದೆ. ಹರಾಜಿನ ಮೂಲಕ ಹಂಚಿಕೆ ಮಾಡುವುದರಿಂದ ಅವುಗಳಿಂದ ₹50 ಕೋಟಿಗೂ ಹೆಚ್ಚು ಆದಾಯ ಬರುವ ನಿರೀಕ್ಷೆ ಇದೆ. ಈಗಾಗಲೆ ನೋಂದಾಯಿಸಿಕೊಂಡವರು ಮಾತ್ರ ಹರಾಜಿನಲ್ಲಿ ಪಾಲ್ಗೊಳ್ಳಬಹುದು. ಅವರಿಗೆ ಜ.7ರಂದು ಹೊನ್ನಾವರದಲ್ಲಿ ಇ–ಹರಾಜು ಪ್ರಕ್ರಿಯೆ ತರಬೇತಿ ನೀಡಲಾಗಿದೆ’ ಎಂದು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.