ಕಾರವಾರ: ಒಂದೆಡೆ ಸಮುದ್ರ, ಇನ್ನೊಂದೆಡೆ ಪರ್ವತದ ಕಾರಣದಿಂದ ಸೀಮಿತ ಭೂಮಿ ಹೊಂದಿರುವ ನಗರದಲ್ಲಿ ನಿವೇಶನಗಳ ಕೊರತೆ ನೀಗಿಸಲು ಅಪಾರ್ಟ್ಮೆಂಟ್ ನಿರ್ಮಾಣ ಹೆಚ್ಚಿದೆ. ಬಹುಮಹಡಿ ವಸತಿ ಸಮುಚ್ಛಯಗಳ ಸಂಖ್ಯೆ (ಅಪಾರ್ಟ್ಮೆಂಟ್) ಶತಕ ದಾಟಿದೆ.

ಆದರೆ, ಕೆಲ ತಿಂಗಳುಗಳಿಂದ ಅಪಾರ್ಟ್ಮೆಂಟ್ಗಳಲ್ಲಿನ ಮನೆಗಳ ಖರೀದಿ ಕುಂಠಿತವಾಗಿದ್ದು, ಫ್ಲ್ಯಾಟ್ಗಳಿಗೆ ಬೇಡಿಕೆ ಕುಸಿದಿದೆ. ಕೋಟ್ಯಂತರ ಬಂಡವಾಳ ಹೂಡಿದ ಬಿಲ್ಡರ್ಗಳು ಆರ್ಥಿಕ ಮುಗ್ಗಟ್ಟು ಎದುರಿಸುವ ಸ್ಥಿತಿ ಬಂದಿದೆ ಎಂಬುದು ಕೆಲ ಬಿಲ್ಡರ್ಗಳ ಅಳಲು.

‘ಸೀಮಿತ ಪ್ರಮಾಣದ ಭೂಮಿ ಹೊಂದಿರುವ ಕಾರವಾರದಲ್ಲಿ ನಿವೇಶನಗಳು ದುಬಾರಿಯಾಗಿರುವ ಕಾರಣಕ್ಕೆ ಅಪಾರ್ಟ್ಮೆಂಟ್ಗಳ ನಿರ್ಮಾಣ ಆರಂಭವಾಯಿತು. ಕಳೆದ ಒಂದು ದಶಕದಿಂದ ಈಚೆಗೆ ಅಪಾರ್ಟ್ಮೆಂಟ್ ನಿರ್ಮಾಣ ಐದಾರು ಪಟ್ಟು ಹೆಚ್ಚಾಗಿದೆ. ಮುಖ್ಯರಸ್ತೆಗಳ ಸಮೀಪದಲ್ಲಿ, ನಗರದ ಹೃದಯ ಭಾಗದಲ್ಲಿ ಜಾಗದ ಲಭ್ಯತೆ ಇಲ್ಲದೆ ಹೊರವಲಯದಲ್ಲಿ, ತೀರಾ ಒಳ ಪ್ರದೇಶದಲ್ಲಿಯೂ ಕಟ್ಟಡ ನಿರ್ಮಾಣಗೊಂಡಿದೆ. ಅಂತಹ ಕಡೆಗಳಲ್ಲಿ ಫ್ಲ್ಯಾಟ್ಗಳ ಬೇಡಿಕೆ ಇನ್ನೂ ಏರಿಕೆಯಾಗಿಲ್ಲ’ ಎಂದು ಬಿಲ್ಡರ್ ಒಬ್ಬರು ಹೇಳಿದರು.

‘ನಿವೇಶನಗಳ ಕೊರತೆ ಒಂದೆಡೆಯಾದರೆ, ಅವುಗಳ ದರವೂ ದುಬಾರಿ. ನಿವೇಶನ ಖರೀದಿಸುವುದು ಬಡ ಮತ್ತು ಕೆಳ ಹಂತದ ಮಧ್ಯಮ ವರ್ಗಕ್ಕೆ ಕಷ್ಟವಾಗುತ್ತಿದೆ. ನಿವೇಶನ ಖರೀದಿಸಿ ಮನೆ ನಿರ್ಮಿಸುವುದಂತೂ ಇನ್ನು ಕಷ್ಟ. ಇದು ಆರ್ಥಿಕ ಹೊರೆಯೂ ಆಗುತ್ತದೆ. ಅಲ್ಲದೇ ಈ ಪ್ರಕ್ರಿಯೆಗಳಿಗೆ ದೀರ್ಘ ಅವಧಿಯೂ ತಗಲುತ್ತದೆ. ಹೀಗಾಗಿ ಕಾರವಾರದಂತಹ ನಗರದಲ್ಲಿ ಫ್ಲ್ಯಾಟ್ಗಳಿಗೆ ಬೇಡಿಕೆ ಹೆಚ್ಚಿದೆ. ಈಗಲೂ ಈ ಬೇಡಿಕೆ ತಗ್ಗಿಲ್ಲ’ ಎಂದು ರಿಯಲ್ ಎಸ್ಟೇಟ್ ನಿರ್ಮಾಣಗಾರರ ಸಂಘಗಳ ಒಕ್ಕೂಟದ (ಕ್ರೆಡಾಯ್) ಕಾರವಾರ ಘಟಕದ ಮಾಜಿ ಅಧ್ಯಕ್ಷ ಕೃಷ್ಣಾನಂದ ಬಾಂದೇಕರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಕಟ್ಟಡ ನಿರ್ಮಾಣ ಸಾಮಗ್ರಿಗಳ ಬೆಲೆ ದುಬಾರಿಯಾಗಿದೆ. ಕಾರವಾರದಲ್ಲಿ ಈ ಸಾಮಗ್ರಿಗಳ ಸಗಟು ವ್ಯಾಪಾರಿಗಳ ಸಂಖ್ಯೆಯೂ ಕಡಿಮೆ ಇದೆ. ಮಹಾನಗರಗಳಿಂದ ಸಾಮಗ್ರಿ ಖರೀದಿಸಿ ತರುವುದು ದುಬಾರಿ. ಅಲ್ಲದೇ ಕರಾವಳಿ ಭಾಗದಲ್ಲಿ ಕಾರ್ಮಿಕರ ಕೊರತೆಯೂ ಇದೆ. ಇವೆಲ್ಲ ಕಾರಣದಿಂದ ಮನೆ ನಿರ್ಮಾಣಕ್ಕಿಂತ ಫ್ಲ್ಯಾಟ್ಗಳ ಖರೀದಿಗೆ ಒತ್ತು ನೀಡಲಾಗುತ್ತಿದೆ’ ಎಂದೂ ಹೇಳಿದರು.

ಕರಾವಳಿ ಭಾಗದಲ್ಲಿ ಸೀಮಿತ ಪ್ರಮಾಣದ ನಿವೇಶನವಿದ್ದು ದರ ಕೂಡ ದುಬಾರಿ. ಇದರಿಂದಾಗಿ ಜನರು ಅಪಾರ್ಟ್ಮೆಂಟ್ಗಳಲ್ಲಿ ಫ್ಲ್ಯಾಟ್ಗಳ ಖರೀದಿಗೆ ಆಸಕ್ತಿ ವಹಿಸುತ್ತಿದ್ದಾರೆ
ಕೃಷ್ಣಾನಂದ ಬಾಂದೇಕರ ಕ್ರೆಡಾಯ್ ಕಾರವಾರ ಘಟಕದ ಮಾಜಿ ಅಧ್ಯಕ್ಷ

ಹೊಸ ನಿರ್ಮಾಣಕ್ಕೆ ಹಿಂದೇಟು!

‘ಅಪಾರ್ಟ್ಮೆಂಟ್ ನಿರ್ಮಾಣಕ್ಕೆ ಅನುಮತಿ ಪಡೆಯವುದು ಈ ಮೊದಲು ಸರಳವಾಗಿತ್ತು. ಈಗ ಅನುಮತಿಗೆ ದೀರ್ಘ ಅವಧಿ ಕಾಯಬೇಕು. ರೇರಾ (ರಿಯಲ್ ಎಸ್ಟೇಟ್ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆ) ನೋಂದಣಿಯಾದ ಬಳಿಕ ನಿರ್ದಿಷ್ಟ ಅವಧಿಯೊಳಗೆ ಕಟ್ಟಡ ಪೂರ್ಣಗೊಳಿಸಬೇಕು. ಮೊದಲು ಅಪಾರ್ಟ್ಮೆಂಟ್ ನಿರ್ಮಾಣವಾಗುತ್ತಿದ್ದಂತೆಯೇ ಫ್ಲ್ಯಾಟ್ಗಳ ನೋಂದಣಿಗೆ ಪೈಪೋಟಿ ನಡೆಯುತ್ತಿತ್ತು. ಈಗ ಕಟ್ಟಡ ನಿರ್ಮಾಣದ ಬಳಿಕ ಫ್ಲ್ಯಾಟ್ಗಳ ನೋಂದಣಿಗೆ ಗ್ರಾಹಕರು ಮುಂದಾಗುತ್ತಿದ್ದಾರೆ. ಕೆಲವು ಕಡೆ ವರ್ಷಗಟ್ಟಲೆ ಕಾಯಬೇಕಾಗುತ್ತಿದೆ.

ಸಾಲ ಮಾಡಿ ಕಟ್ಟಡ ನಿರ್ಮಿಸಿದವರು ಆರ್ಥಿಕ ಮುಗ್ಗಟ್ಟು ಎದುರಿಸಬೇಕಾಗುತ್ತಿದೆ. ಈ ಕಾರಣದಿಂದ ಹೊಸ ಕಟ್ಟಡ ನಿರ್ಮಾಣ ಪ್ರಮಾಣ ಕಡಿಮೆಯಾಗಿದೆ’ ಎಂದು ಬಿಲ್ಡರ್ ಒಬ್ಬರು ಸಮಸ್ಯೆ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.